ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದ 15 ವರ್ಷದ ಬಾಲಕಿ ಮೇಲೆ ಜೆಸಿಬಿ ಚಾಲಕ ಅತ್ಯಾಚಾರ ಎಸಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಗದಗ್ ನಲ್ಲಿ ನಡೆದಿದೆ.
ಮಾರ್ಚ್ 20ರಂದು ಕೂಲಿ ಕೆಲಸಕ್ಕೆಂದು ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದು, 23 ರಂದು ಪ್ರಕರಣ ದಾಖಲಿಸಿಕೊಂಡಿದ್ದ ನರಗುಂದ ಪೊಲೀಸರು ತನಿಖೆ ಕೈಗೊಂಡು ಭಾನುವಾರ ಬಾಲಕಿಯ ಶವ ಪತ್ತೆ ಹಚ್ಚಿದ್ದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಬಾಲಕಿಯ ಶವ ಪತ್ತೆ ಆಗಿದ್ದು, ಸವದತ್ತಿ ತಾಲೂಕಿನ ನಾಗನೂರು ಗ್ರಾಮದ ನಿವಾಸಿ ಸದ್ದಾಂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಮಾರಕಾಸ್ತ್ರಗಳಿಂದ ಕೊಲೆಗೈದಿರುವುದು ದೃಢಪಟ್ಟಿದೆ.
ಜೆಸಿಬಿ ಡ್ರೈವರ್ ಆಗಿ ಕಾರ್ಯ ನಿರ್ವಸುತ್ತಿದ್ದ ಸದ್ದಾಂ, ನರಗುಂದ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಬಾಡಿಗೆ ಮನೆಯ ಹಿಂದೆಯೇ ವಾಸವಾಗಿದ್ದ ಬಾಲಕಿಯ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಸದ್ದಾಂ, ಹೊರಗಡೆ ಹೋಗೋಣ ಎಂದು ಕರೆದುಕೊಂಡು ಈ ಕೃತ್ಯ ಎಸಗಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.