ನವದೆಹಲಿ: ಕೊರೋನಾ ಸೋಂಕು ಪ್ರಕರಣಗಳು ದೇಶಾದ್ಯಂತ ನಿಯಂತ್ರಣ ಮೀರಿ ಹೆಚ್ಚುತ್ತಿವೆ. ಕಳೆದ ಕೆಲವು ದಿನಗಳಿಂದ ದಿನಂಪ್ರತಿ ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢವಾಗುತ್ತಿವೆ.
ಅಲ್ಲದೆ ಲಸಿಕೆ ಪಡೆದವರು ಕೂಡ ಕೊರೋನಾ ಪಾಸಿಟಿವ್ ಆಗುತ್ತಿದ್ದಾರೆ. ಇದು ಇನ್ನೊಂದು ಬಗೆಯ ಭಯ ಸೃಷ್ಟಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ನಡುವೆ ಮಹತ್ವದ ಸಭೆ ನಡೆಯಲಿದೆ.
ಸಂಜೆ 6.30ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಚರ್ಚೆ, ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ವೀಕೆಂಡ್ ಲಾಕ್ಡೌನ್, ನೈಟ್ ಕರ್ಫ್ಯೂ ಮತ್ತಿತರ ಕ್ರಮಗಳನ್ನು ಜಾರಿ ಮಾಡುವ ಬಗ್ಗೆ, ಚರ್ಚೆ ನಡೆಯುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಬಳಿಕ ದೇಶದ್ಯಾಂತ ಏಕ ರೂಪದ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.