ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಎರಡನೇ ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರಧಾನಿ ಲಸಿಕೆಯನ್ನು ಪಡೆದಿದ್ದಾರೆ.
ಜ.16ರಂದು ದೇಶಾದ್ಯಂತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೊರೋನಾ ವಿರುದ್ಧ ಹೋರಾಡಬೇಕಾದರೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು.
ನೀವು ಲಸಿಕೆ ಹಾಕಿಸಿಕೊಳ್ಳಲು ಅರ್ಹರಿದ್ದರೆ ಕೋವಿನ್ ವೆಬ್ಸೈಟ್ಗೆ ಲಾಗಿನ್ ಆಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪಾಂಡಿಚೆರಿ ಮೂಲದ ನಿವೇದಾ ಮತ್ತು ಪಂಜಾಬ್ ಮೂಲದ ನಿಶಾ ಶರ್ಮಾ ಎಂಬುವವರು ಪ್ರಧಾನಿ ಮೋದಿ ಅವರಿಗೆ ಲಸಿಕೆ ನೀಡಿದ್ದಾರೆ.
ಮಾರ್ಚ್ 1ರಂದು ಪ್ರಧಾನಿ ಮೋದಿ ಮೊಲದ ಡೋಸ್ ಲಸಿಕೆ ಪಡೆದಿದ್ದರು. ದೇಶಾದ್ಯಂತ ಇಲ್ಲಿಯವರೆಗೆ ಒಟ್ಟು 7,59,79,651 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.