ಮುತಾಲಿಕ್ ಒದ್ದು ಒಳಗಡೆ ಹಾಕಿ – ಮಾಜಿ ಸಿಎಂ ಹೆಚ್ಡಿಕೆ ಹೆಚ್ಡಿಕೆ ಆಗ್ರಹ

ಇದು ರಾಮಸೇನೆಯೋ, ರಾವಣ ಸೇನೆಯೋ ಮುತಾಲಿಕ್ ನಂತವರನ್ನ ಒದ್ದು ಒಳಗಡೆ ಹಾಕದೇ ಹೋದರೆ ರಾಜ್ಯದಲ್ಲಿಸವ೯ಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸತ್ಯ ನಿಮ್ಮ ಪರವಾಗಿದ್ರೆ, ನ್ಯಾಯಾಲಯಕ್ಕೆ ಹೋಗಿ:ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸವಾಲು |  we are not going to contest in loksabha election:Pramod Muthalik - Kannada  Oneindia

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಅವರು ಸಮಾಜ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡಲಿಕ್ಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇಂತಹ ವಿಷಯಗಳು ಬೃಹದಾಕಾರವಾಗಿ ಬೆಳಯಲಿಕ್ಕೆ ಸಕಾ೯ರ ಮೌನವಾಗಿ ಒಪ್ಪಿಗೆ ಸೂಚಿಸೋದು ನಿಲ್ಲಿಸಬೇಕು. ನಾನು ಬೆಳಿಗ್ಗೆಯಿಂದ ನೋಡಿದ್ದೇನೆ.. ಇದು ರಾಮ ಸೇನೆಯೋ, ರಾವಣನ ಸೇನೆಯೋ ಎಂದು ಕೇಳಿದ್ದಾರೆ. ಇದನ್ನೂ ಓದಿ : –  48 ಗಂಟೆಗಳ ಅವಧಿಯಲ್ಲಿ ಕಿತ್ತುಹೋದ ಮಲ್ಪೆಯ ತೇಲುವ ಸೇತುವೆ

ಆಜಾನ್ ಸುಪ್ರಿಂ ಕೋರ್ಟ್ ನಿಗದಿಯಾದ ಸೌಂಡ್ ನಂತೆ ಇರಲಿ, ಸಕಾ೯ರ ಇದಕ್ಕೆ ಪರ್ಮಿಷನ್ ಕೊಟ್ಟು ಬಿಡಲಿ. ಇದಕ್ಕೇನು ದೊಡ್ಡ ಪ್ರಚಾರದ ಅವಶ್ಯಕತೆ ಇಲ್ಲ. ಹಿಂದೂತ್ವ ಉಳಿಸೋಕೆ ಹನುಮಾನ ಚಾಲೀಸ್ ಹೇಳಿದ್ರೆ ಆಗಲ್ಲ. ಪ್ರತಿ ದಿನ ಮನೆಯಲ್ಲಿ ನಾವು ಹೇಳೋಲ್ವೆ.ಏನಾದ್ರೂ ಸಮಸ್ಯೆ ಆದ್ರೆ, ಆರೋಗ್ಯ ತೊಂದರೆ ಆದ್ರೆ ಹನುಮಾನ ಚಾಲೀಸ್ ಹೇಳ್ತೀವಿ. ಇದೇನು ದೊಡ್ಡ ಸಾಧನೆ ಏನಲ್ಲ. ನಮಗೆ ಇದೆಲ್ಲಾ ಬೇಕಾಗಿಲ್ಲ. ಹೋದ ವಷ೯ದ ಬೆಳೆ ವಿಮೆ ದುಡ್ಡೇ ಬಂದಿಲ್ಲ, ಇದಕ್ಕೆ ನಮ್ಮ ಹೋರಾಟ ಇರಬೇಕು.

ಏನು ಗಂಟೆ ಬಾರಿಸಿದರೆ ನಿಮಗೆಲ್ಲಾ ಸಿಕ್ಕಿ ಬಿಡುತ್ತಾ. ಈ ಮಧ್ಯೆ 120 ರೂ.ಪೆಟ್ರೋಲ್, 100 ಡಿಸೈಲ್, ಸಾವಿರ ರೂಪಾಯಿ ಗ್ಯಾಸ್ ರೇಟ್ ಇದೆ. ಈ ಬಗ್ಗೆ ನೀವ್ಯಾರು ಮಾತನಾಡೋಕೆ ರೆಡಿ ಇಲ್ಲ. ಈ ವಿಷಯ ಹಿಡಿದುಕೊಂಡು ನಾವು ಹೊರಟಿದ್ದೇವೆ. ಜನರು ಸಾಯಿತ್ತಿದ್ದಾರೆ, ಜನರ ಜೀವನ ಜೊತೆ ಆಟಬೇಡಿ.ಇದನ್ನು ಸರಿಪಡಿಸಬೇಕಾಗಿರೋದು ಹೋರಾಟಗಾರರ, ಸಂಘಟನೆಗಳ ಕರ್ತವ್ಯ ಎಂದು ತಿಳಿಸಿದ್ರು.

ಇದನ್ನೂ ಓದಿ : –  ಪ್ರತಿಯೊಂದಕ್ಕೂ ಜಾತಿ,ಧರ್ಮ,ಪಕ್ಷ ತರಬೇಡಿ – ಯು.ಟಿ ಖಾದರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!