ಲಂಡನ್: ಇಲ್ಲೊಬ್ಬ ಭೂಪ ತನ್ನ ಮುರಿದು ಹೋದ ಮೊಬೈಲ್ ಸ್ಕ್ರೀನ್ನ್ನು ರಿಪೇರಿ ಮಾಡಬೇಡಿ ಎಂದು ಮೊಬೈಲ್ ರಿಪೇರಿ ಅಂಗಡಿಯವನಿಗೆ ಲಂಚ ನೀಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಈ ವಿಚಾರ ಟ್ರೆಂಡಿಂಗ್ನಲ್ಲಿದೆ.
ಮೊಬೈಲ್ ರಿಪೇರಿ ಅಂಗಡಿಯವನಿಗೆ ತನ್ನ ಬಳಿ ರಿಪೇರಿಗೆ ಬಂದಿದ್ದ ಮೊಬೈಲ್ ಕವರ್ ತೆಗೆದು ನೋಡಿದಾಗ ಅಚ್ಚರಿ ಕಾದಿತ್ತು. ಕೆಟ್ಟು ಹೋದ ಈ ಐಫೋನ್ನ್ನು ರಿಪೇರಿ ಮಾಡಬೇಡ ಎಂದು ಚೀಟಿಯಲ್ಲಿ ಬರೆದು ಫೋನ್ ಕವರ್ನಲ್ಲಿ ಇಡಲಾಗಿತ್ತು.
ದಯವಿಟ್ಟು ನನ್ನ ಫೋನ್ನ್ನು ಸರಿ ಮಾಡಬೇಡಿ. ನನ್ನ ಹೆಂಡತಿ ನನ್ನನ್ನು ಕೊಂದುಬಿಡುತ್ತಾಳೆ. ಈ 200 ಡಾಲರ್ ಹಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ನಿಮಗೆ ನನ್ನ ತುಂಬುಹೃದಯದ ಧನ್ಯವಾದಗಳು ಎಂದು ಬರೆದ ಪತ್ರ ನೋಡಿದ ಅಂಗಡಿಯಾತ ಅವಾಕ್ಕಾಗಿದ್ದಾನೆ.
ಈ ಕೈಬರಹದ ಪತ್ರವನ್ನು ಅಂಗಡಿಯ ಮಾಲೀಕ, ನನ್ನ ಗ್ರಾಹಕರು ತಮ್ಮ ಗರ್ಲ್ಫ್ರೆಂಡ್ಗಳಿಗೆ ವಂಚಿಸುವುದನ್ನು ನೋಡಲು ನನಗೆ ತುಂಬಾ ಸಂತಸವೆನಿಸುತ್ತದೆ ಎಂದು ಕ್ಯಾಪ್ಷನ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ತರಹೇವಾರಿ ಕಮೆಂಟ್ಗಳು ಬರುತ್ತಿವೆ. ಗಂಡ ಹೆಂಡಿರ ಜಗಳದಲ್ಲಿ ಮೊಬೈಲ್ ಅಂಗಡಿಯವನು ಶ್ರೀಮಂತನಾದ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.