ಆನ್ ಲೈನ್ ಮಟ್ಕಾ ಸೇರಿದಂಥೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಮಟ್ಕಾ ದೊರೆ ಅಶ್ವಥ್ ನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಪಾವಗಡದಲ್ಲಿ ಮಟ್ಕಾ ಸೇರಿದಂತೆ ಹಲವು ಅಕ್ರಮ ನಡೆಸುತ್ತಾ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಅಶ್ವಥ್ ತುಮಕೂರು ಪೊಲೀಸರು ಬಲೆ ಹೆಣೆದು ಬಂಧಿಸಿದ್ದಾರೆ.
ಕಳೆದ 25 ವರ್ಷಗಳಿಂದ ಮಟ್ಕಾ ನಡೆಸುತ್ತಿದ್ದ ಅಶ್ವಥ್ ಸಾಕ್ಷಿಗಳ ಕೊರತೆಯಿಂದ ಕೇಸುಗಳಿಂದ ಖುಲಾಸೆಗೊಳ್ಳುತ್ತಿದ್ದ. ಅನೇಕ ಬಾರಿ ಗಡಿಪಾರಾಗಿ ಬಳ್ಳಾರಿ ಜೈಲಿನಲ್ಲೂ ಕೂಡ 6 ತಿಂಗಳು ಸೆರೆವಾಸ ಅನುಭವಿಸಿದ್ದ.
ವಾಟ್ಸಪ್ ಗ್ರೂಪ್ ಮಾಡಿ ಮಟ್ಕಾ ಬುಕ್ಕಿಗಳನ್ನ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಅಶ್ವಥ್ ಗೆ ಮುಂಬೈನಿಂದ ಮಟ್ಕಾ ರಿಸಲ್ಟ್ ಪಡೆದು ಪೇಮೆಂಟ್ ಪಡೀತಿದ್ದ. ಯುಗಾದಿ ಹಬ್ಬಕ್ಕಾಗಿ ಪಾವಗಡಕ್ಕೆ ಬಂದಾಗ ಏಕಾಏಕಿ ದಾಳಿ ನಡೆಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ವಿಶೇಷ ಪೊಲೀಸ್ ತಂಡ ರಹಸ್ಯವಾಗಿ ಅಶ್ವಥ್ ಚಲನವಲನಗಳ ಮೇಲೆ ನಿಗಾ ವಹಿಸಿದ್ದು, ಏಪ್ರಿಲ್ 13 ರಂದು ಮಫ್ತಿಯಲ್ಲಿ ಇಡೀ ದಿನ ಕಾದು ಕುಳಿತಿದ್ದ ಪೊಲೀಸರಿಗೆ ಮನೆ ಬಳಿಯೇ ಸಿಕ್ಕಿಬಿದ್ದಿದ್ದ.
ತುಮಕೂರು ಎಸ್ಪಿ ಡಾ. ವಂಸಿಕೃಷ್ಣ ಎಎಸ್ಪಿ ಉದೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಗೂಂಡಾ ಖಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.