ಚಾಮರಾಜನಗರ ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ ಆಗಿದ್ದರಿಂದ 24 ಸೋಂಕಿತರು ಸಾವು ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ದುರಂತ ಪ್ರಕರಣಕ್ಕೆ ಕಾರಣವಾದ ಆಕ್ಸಿಜನ್ ಕೊರತೆ ಕುರಿತು ಹೈಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಆಯೋಗದ ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಆಕ್ಸಿಜನ್ ಪೂರೈಕೆ ತಡೆ ಹಿಡಿದ ಬಗ್ಗೆ ದಾಖಲೆಗಳಿಲ್ಲ ಎಂದು ತಿಳಿಸಿದೆ.
ಚಾಮರಾಜನಗರ ದುರಂತಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರ ಕ್ರಿಯಾಶೀಲತೆಯ ಕೊರತೆಯೇ ಕಾರಣ ಎಂದು ಹೈಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಮೈಸೂರು ಜಿಲ್ಲಾಧಿಕಾರಿ ಆಕ್ಸಿಜನ್ ಪೂರೈಕೆಯನ್ನು ತಡೆ ಹಿಡಿದಿಲ್ಲ. ಆಕ್ಸಿಜನ್ ಕೊರತೆ ಗಮನದಲ್ಲಿದ್ದರೂ ಸೂಕ್ತವಾಗಿ ಸ್ಪಂದಿಸದ ಚಾಮರಾಜನಗರ ಡಿಜಿ ರವಿ ಕಾರಣ ಎಂದು ಹೇಳಿದೆ.
ಮೇ 2ರಿಂದ ಮೇ 3ರ ಬೆಳಿಗ್ಗೆ 3 ಗಂಟೆಯವರೆಗೆ ಆಕ್ಸಿಜನನ್ ಇರಲಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದಕ್ಕೆ ಸೂಕ್ತವಾಗಿ ಕ್ರಮ ಕೈಗೊಳ್ಳದ ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಯೇ ಕಾರಣ ಎಂದು ತನಿಖಾ ವರದಿ ಹೇಳಿದೆ.