ಹೆಬ್ಬಾವು ಅಂತ ಹಿಡಿಯಲು ಹೋದ ಯುವಕನಿಗೆ ಕೊಳಕು ಮಂಡಲ ಹಾವು ಕಚ್ಚಿದ್ದರಿಂದ ಆತ ಮೃತಪಟ್ಟ ದಾರುಣ ಘಟನೆ ಮೈಸೂರಿನಲ್ಲಿ ಸಂಭಿಸಿದೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಮಧು (24) ಮೃತಪಟ್ಟ ದುರ್ದೈವಿ.
ಮಹದೇಶ್ವರ ಬೆಟ್ಟಕ್ಕೆ ಎಲೆಕ್ಟ್ರಿಕ್ ಕೆಲಸಕ್ಕೆ ಸ್ನೇಹಿತರ ಜೊತೆ ಹೋಗಿದ್ದ ಮಧು ಹೆಬ್ಬಾವು ಎಂದು ಭಾವಿಸಿದ್ದ ಮಧು ಹಾವು ಹಿಡಿಯಲು ಹೋಗಿದ್ದಾನೆ. ಆದರೆ ಕೊಳಕ ಮಂಡಳ ಹಾವು ಕಚ್ಚಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದ.
ಹಾವು ಹಿಡಿಯಲು ಹೋಗಿದ್ದ ವೇಳೆ ಹಾವು ಕಚ್ಚಿದ್ದರಿಂದ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.