ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇರಳದಲ್ಲಿ ಅನಾಥಾಶ್ರಮದ ಮಕ್ಕಳ ಜೊತೆ ಈಸ್ಟರ್ ಭೋಜನ ಸವಿಯುವ ವೇಳೆ ಮಕ್ಕಳ ಒತ್ತಾಯದ ಮೇರೆಗೆ ಸೋದರಿ ಪ್ರಿಯಾಂಕ ಗಾಂಧಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿಸಿದರು.
ಕೇರಳ ವಿಧಾನಸಭಾ ಚುನಾವಣೆ ಪ್ರಯುಕ್ತ ಪ್ರಚಾರದಲ್ಲಿರುವ ರಾಹುಲ್ ಗಾಂಧಿ ಭಾನುವಾರ ಈಸ್ಟರ್ ಪ್ರಯುಕ್ತ ಶುಭ ಕೋರಿದ್ದರು. ಭರವಸೆ ಹಾಗೂ ಹೊಸ ಆರಂಭದ ಪ್ರತೀಕವಾದ ಈಸ್ಟರ್ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿ ಶುಭ ಕೋರಿದ್ದರು.
ತಮ್ಮ ಕ್ಷೇತ್ರವಾದ ವಯನಾಡ್ ನ ಜೀವನ ಜ್ಯೋತಿ ಅನಾಥಾಶ್ರಮಕ್ಕೆ ಮಧ್ಯಾಹ್ನ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮಕ್ಕಳ ಜೊತೆ ರುಚಿ ರುಚಿಯಾದ ಭೋಜನ ಸ್ವೀಕರಿಸಿದರು. ಈ ವೇಳೆ ಮಕ್ಕಳು ಪ್ರಿಯಾಂಕ ಗಾಂಧಿ ಅವರನ್ನು ನೋಡಿ ಮಾತನಾಡುವ ಆಸೆ ವ್ಯಕ್ತಪಡಿಸಿದಾಗ ಊಟ ಮಾಡುತ್ತಲೇ ವೀಡಿಯೋ ಕಾಲ್ ಮಾಡಿ ಮಾತನಾಡಿಸಿ ಮಕ್ಕಳನ್ನು ಖುಷಿಪಡಿಸಿದರು.