ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪಿಸುವ ಯೋಜನೆ ಇಲ್ಲ- ಎಲಾನ್ ಮಸ್ಕ್

ಭಾರತದಲ್ಲಿ (INDIA ) ಟೆಸ್ಲಾ (TESLA ) ‘ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ’ವನ್ನು ತೆರೆಯಲ್ಲ ಎಂದು ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ( ELON MUSK ) ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್ಟರ್ ಬಳಕೆದಾರನೊಬ್ಬ ಮೇ 27 ರಂದು, ಎಲೋನ್ ಮಸ್ಕ್ ಅವರಿಗೆ, ಭವಿಷ್ಯದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನ ಭಾರತದಲ್ಲಿ ತಯಾರಿಸುತ್ತಿದೆಯೇ’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿರುವ ಎಲಾನ್ ಮಸ್ಕ್ ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು (ಇವಿ) ಉತ್ಪಾದನಾ ಕಂಪನಿಯು ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಮುಂದಿನ ದಿನಗಳಲ್ಲಿ ತೆರೆಯುವ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ :- ಪತಿ ಜೊತೆ ಫೋಟೋಶೂಟ್ ನಲ್ಲಿ ಮಿಂಚಿದ ಪ್ರಣಿತಾ

ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ಒದಗಿಸಲು ನಮಗೆ ಅನುಮತಿ ನೀಡದ ಹೊರತು ಯಾವುದೇ ಸ್ಥಳದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಎಲಾನ್ ಮಸ್ಕ್ ಒಡಂತನದ ಟೆಸ್ಲಾ ತನ್ನ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಬಯಸಿದೆ. ಆದರೆ, ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಆಮದು ಸುಂಕ ಅತ್ಯಧಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ : – ಬೆಂಗಳೂರಿನ ಅಣ್ಣಮ್ಮ ದೇವಸ್ಧಾನಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!