ತಮಿಳುನಾಡಿನ ನಟರಾಜ ದೇವಾಲಯದ ವೈಜ್ಞಾನಿಕ ಮಹತ್ವ ಏನು ಗೊತ್ತಾ..? ಇಲ್ಲಿದೆ ಚಿದಂಬರ ರಹಸ್ಯ..!

ಚಿದಂಬರಂ ದೇವಾಲಯ. ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ. ಇದು ತಮಿಳು ನಾಡಿನ ಚಿದಂಬರಂ(CHIDAMBARAM) ಎಂಬ ನಗರದ ಹೃದಯ ಭಾಗದಲ್ಲಿದೆ. ಈ ನಗರವು ತಮಿಳುನಾಡಿನ ಕಡಲೂರು, ಎಂಬ ಜಿಲ್ಲೆಗೆ ಸೇರಿದೆ. ಚಿದಂಬರಂ ಶಿವನ ಅತ್ಯಂತ ಐದು ಪವಿತ್ರ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರತಿಯೊಂದು ದೇವಾಲಯವೂ ಪಂಚ ಭೂತಗಳಲ್ಲಿ ಒಂದನ್ನು ಸೂಚಿಸುತ್ತದೆ. ಇವುಗಳಲ್ಲಿ ಚಿದಂಬರಂ ದೇವಾಲಯವು ಆಕಾಶ (ಮೋಡರಹಿತ ಶುದ್ಧ ಆಕಾಶ)ವನ್ನು ಸೂಚಿಸುತ್ತದೆ.


ಈ ದೇವಾಲಯದ ಅದ್ವಿತೀಯ ಲಕ್ಷಣವೆಂದರೆ ಆಭರಣಾಲಂಕೃತನಾದ ನಟರಾಜ (NATARAJA)ನ ವಿಗ್ರಹ. ಇದು ಭರತನಾಟ್ಯಂ ದೇವರಾದ ಭಗವಂತನಾದ ಶಿವನನ್ನು ಚಿತ್ರಿಸುತ್ತದೆ. ಶಿವನನ್ನು ಉತ್ಕೃಷ್ಟವಾದ ಲಿಂಗದ ರೂಪಕ್ಕೆ ಬದಲಾಗಿ ಮಾನವಾತಾರದ ಮೂರ್ತಿಯ ರೂಪದಲ್ಲಿರಿಸಿದ ಕೆಲವೇ ದೇವಾಲಯಗಳಲ್ಲಿ ಇದೂ ಒಂದಾಗಿದೆ. ನಟರಾಜನ ವಿಶ್ವ ನರ್ತನವು ಭಗವಂತನಾದ ಶಿವ (SHIVA)ನು ವಿಶ್ವದ ಚಲನವಲನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತದೆ.


ನಿರಾಕಾರನಾದ ಶಿವನನ್ನು ಚಿದಂಬರಂನಲ್ಲಿ ಪೂಜಿಸಲಾಗುತ್ತದೆ. ಭಗವಂತನಾದ ಶಿವನು ತನ್ನ ಹೆಂಡತಿಯಾದ ಶಕ್ತಿ ಅಥವಾ ಶಿವಗಾಮಿ ಯೊಂದಿಗೆ ನಿರಂತರ ಸಂತೋಷವಾದ “ಆನಂದ ತಾಂಡವ” ನೃತ್ಯದಲ್ಲಿ ತೊಡಗಿದ್ದಾನೆ ಎಂದು ನಂಬಲಾಗಿದೆ. ಈ ಸ್ಥಳವನ್ನು ಒಂದು ಪರದೆಯಿಂದ ಮುಚ್ಚಲಾಗಿದೆ.

ಇದನ್ನು ಎಳೆದಾಗ ಭಗವತನ ಸನ್ನಿಧಾನವನ್ನು ಸೂಚಿಸುವ ಚಿನ್ನದ “ಬಿಲ್ವ” ಎಲೆಗಳ ತೋರಣವನ್ನು ತೂಗುಬಿಟ್ಟಿರುವುದನ್ನು ಕಾಣಬಹುದು. ಪರದೆಯ ಹೊರಭಾಗವು ಕಪ್ಪುಬಣ್ಣದಿಂದ ಕೂಡಿದ್ದು (ಅಜ್ಞಾನದ ಸಂಕೇತವನ್ನು ಸೂಚಿಸುತ್ತದೆ),ಅದರ ಒಳಭಾಗವು ಪ್ರಕಾಶಮಾನವಾದ ಕೆಂಪು ಬಣ್ಣವನ್ನು ಹೊಂದಿದೆ (ಅರಿವು ಮತ್ತು ಆನಂದದ ಸೂಚಕ)ವಾಗಿದೆ.


ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ಮಂದಿರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದು, ಸೃಷ್ಟಿಯ ಅದ್ಭುತ ತೀರ್ಥಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಈ ದೇವಾಲಯ ಹಲವು ರಹಸ್ಯಗಳನ್ನು ಒಡಲಲ್ಲಿಟ್ಟುಕೊಂಡಿದೆ. ಶಿವನು ಇಲ್ಲಿ ಪ್ರಣವ ಮಂತ್ರ “ಓಂ” (OM) ರೂಪದಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ನಂಬಿಕೆ.


ಕಾಳಹಸ್ತಿಯಲ್ಲಿರುವ ಈಶ್ವರನ ಕ್ಷೇತ್ರ ವಾಯು ಕ್ಷೇತ್ರ, ಕಂಚಿಯಲ್ಲಿ ಪೃಥ್ವಿ ಕ್ಷೇತ್ರ, ತಿರುವಣ್ಣಾಮಲೈ ನಲ್ಲಿರುವುದು ಅಗ್ನಿ ಕ್ಷೇತ್ರವಾದರೆ ತಿರುವನೈಕಾದಲ್ಲಿ ಜಲ ಕ್ಷೇತ್ರವಾದರೆ ಚಿದಂಬರಂ ಶಿವನ ಆಕಾಶ ಕ್ಷೇತ್ರವಾಗಿದೆ. ಈ ಆಕಾಶ ಕ್ಷೇತ್ರಕ್ಕೂ ವಿಜ್ಞಾನ ಕ್ಷೇತ್ರದ ಅಂತರಿಕ್ಷಕ್ಕೂ ಸಾಮ್ಯತೆಗಳಿದೆ ಎನ್ನಲಾಗಿದೆ.ನಟರಾಜ ಮಂದಿರದ ಸ್ಥಳ ಪುರಾಣ ಚಿದಂಬರ ಕ್ಷೇತ್ರವನ್ನು ವಿಶ್ವದ ಕೇಂದ್ರ ಎನ್ನಲಾಗಿದೆ.


ಭೌತ ವಿಜ್ಞಾನಿ ಫ್ರಿಟ್ಜೋ ಕಾಪ್ರಾ ಅವರ ತಾವೋ ಆಫ್ ಫಿಸಿಕ್ಸ್ ಎಂಬ ಕೃತಿಯಲ್ಲೂ ಚಿದಂಬರಂ ನ ನಟರಾಜನ ನೃತ್ಯದ ಬಗ್ಗೆಯೇ ಒಂದು ಅಧ್ಯಾಯ ಬರೆಯಲಾಗಿದೆ. ಭೌತ ಶಾಸ್ತ್ರಗಳಲ್ಲಿ ಬರುವ ಅಣುಗಳ ನರ್ತನಕ್ಕೂ ಚಿದಂಬರಂ ನ ನಟರಾಜನ ನರ್ತನಕ್ಕೂ ಸಾಮ್ಯತೆಯನ್ನು ಚಿತ್ರಿಸಲಾಗಿದೆ. ನಟರಾಜನ ವಿವಿಧ ನೃತ್ಯ ಪ್ರಕಾರಗಳಿದ್ದು ಚಿದಂಬರಂ ನ ನಲ್ಲಿರುವ ನಟರಾಜನದ್ದು ತಾಂಡವ ನೃತ್ಯ( ಅಥವಾ ನಾಶದ ಮುನ್ಸೂಚನೆ ನೀಡುವ ತಾಂಡವ ನರ್ತನ) ಎನ್ನಲಾಗಿದೆ.


ಭೂಮಿಯ ಆಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಅಕ್ಷಾಂಶ – ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆ ನಟರಾಜ ದೇವಾಲಯವಿರುವ ಚಿದಂಬರಂ ನ ಮೂಲಕ ಹಾಯುತ್ತದೆ ಎಂಬುದು ಮತ್ತೊಂದು ಅಚ್ಚರಿ. ಈ ಹಿನ್ನೆಲೆಯಲ್ಲಿ ಶಿವ ಈ ಸ್ಥಳವನ್ನು ಸೃಷ್ಟಿಯ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ, ಲಯ ಕಾರ್ಯಕ್ಕೂ ಇದನ್ನೇ ಕ್ಷೇತ್ರವಾಗಿ ಮಾಡಿಕೊಂಡ. ನಟರಾಜನ ನೃತ್ಯ ಸೃಷ್ಟಿ, ಸ್ಥಿತಿ, ಲಯ, ಸಾಕಾರ ಮತ್ತು ಮುಕ್ತಿ ಎಂಬ ಶಿವನ ಐದು ಚಟುವಟಿಕೆಗಳನ್ನು ದಾಖಲಿಸುತ್ತದೆ ಎನ್ನಲಾಗಿದೆ.


ದೇವಾಲಯದ ಪ್ರತಿಯೊಂದು ಕಂಬಗಳು ಕೂಡ ಭರತನಾಟ್ಯದ ವಿವಿಧ ಭಾವ ಭಂಗಿಗಳನ್ನು ವ್ಯಕ್ತಪಡಿಸುವ ಶಿಲ್ಪಕಾರ್ಯವನ್ನು ಹೊಂದಿದೆ. ಇದೇ ಭಂಗಿಗಳ ಬಗ್ಗೆ ಭೌತ ವಿಜ್ಞಾನಿಗಳೂ ಅಧ್ಯಯನ ನಡೆಸಿದ್ದಾರೆ. ವಿಜ್ಞಾದ ಹೊರತಾಗಿ, ಧಾರ್ಮಿಕವಾಗಿ ನೋಡಿದರೂ ಇದು ಅಪರೂಪದ ದೇವಾಲಯ ಎನಿಸಿಕೊಳ್ಳುತ್ತದೆ.


ನಟರಾಜನಿಗೆ ಸಂಬಂಧಪಟ್ಟ ವಿವರಣೆಗಳೆಲ್ಲವನ್ನೂ ಸ್ವಿಜರ್ಲೆಂಡ್ ನ ಸಿಇಆರ್ಎನ್ (CERA) ದ ಅಂದ್ರೆ ಯುರೋಪಿಯನ್ ಯೂನಿಯನ್ ರಿಸರ್ಚ್ ಸೆಂಟರ್ ನ ಹೊರಗಿನ ಮೂರ್ತಿಯೆದುರಿಗೆ ಫಲಕದಲ್ಲಿ ದಾಖಲಿಸಲಾಗಿದೆ. ನಮಗೆ ಅದು ಬರಿಯ ವಿಗ್ರಹವಾಗಿರಬಹುದು ದೇವ ಕಣದ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ ಅದರೊಳಗೆ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್, ಫೋಟಾನುಗಳೆಲ್ಲ ಆಕರ್ಷಣೆಗೊಳಗಾಗಿ ನರ್ತಿಸುವುದು ಕಾಣುತ್ತದೆ.

ಇದನ್ನೂ ಓದಿ :-  ಬೆಂಗಳೂರಿನ ಅಣ್ಣಮ್ಮ ದೇವಸ್ಧಾನಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!