ರಾಜ್ಯದಲ್ಲಿ ಕೊರೊನಾ ಸೋಂಕು ಇಳಿದಿಲ್ಲವಾ? ಸ್ವತಃ ಮುಖ್ಯಮಂತ್ರಿಗಳಿಗೆ ಇದರ ಮಾಹಿತಿ ಇಲ್ಲವಾ? ಅಥವಾ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಮುಖ್ಯಮಂತ್ರಿಗಳಾ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರಾ?
ಹೌದು, ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿಗಳ ದಾರಿ ತಪ್ಪಿಸುತ್ತಿದ್ದಾರಾ ಎಂಬ ಅನುಮಾನ ಕಾಡತೊಡಗಿದೆ. ಇದಕ್ಕೆ ಕಾರಣ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಹೇಳುತ್ತಿರುವುದು.
ಕೋವಿಡ್ ಪಾಸಿಟಿವ್ ಸಂಖ್ಯೆಗಳನ್ನು ಮುಚ್ಚಿಡುವ ಮೂಲಕ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಹಾಕುತ್ತಿರುವ ಶ್ರಮವನ್ನು ವ್ಯರ್ಥ ಮಾಡಲಾಗುತ್ತಿದೆ. ಏಕೆಂದರೆ ಸರಿಯಾದ ಅಂಕಿ-ಅಂಶ ಕೊರತೆಯಿಂದ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರಿಂದ ಜನರು ಮತ್ತೆ ಆತಂಕ ಎದುರಿಸಬೇಕಾಗುತ್ತದೆ.
ಪ್ರತಿದಿನ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಬುಲೆಟ್ ನಲ್ಲಿ ಕೆಲವೇ ಸಾವಿರ ಲೆಕ್ಕದಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಕಾರ್ಯಪಡೆ ಚರ್ಚೆ ವೇಳೆ 40,000ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ ಎಂದು ಪ್ರಸ್ತಾಪಿಸಲಾಗುತ್ತದೆ. ಹಾಗಾದರೆ ಜನರಿಗೆ ತಿಳಿಸುವ ಅಂಕಿ-ಅಂಶ ಒಂದು, ವಾಸ್ತವವಾಗಿ ಮತ್ತೊಂದು ಲೆಕ್ಕ ಇದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ಸಚಿವರು, ಅಧಿಕಾರಿಗಳನ್ನು ಸಭೆ ಕರೆದು ವಿಚಾರಿಸಿ ಪ್ರತಿದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೂಕ್ತ ಅಂಕಿ-ಅಂಶ ಪಡೆದರೆ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ರಾಜ್ ನ್ಯೂಸ್ ನಿಖರವಾದ ಮಾಹಿತಿ ಇದೆ.