– ವರದಿ : ಶೃತಿ ರಿಪ್ಪನ್‍ಪೇಟೆ
ಸಲ್ಮಾನ್ ಖಾನ್ ಆಕ್ಟ್ ಮಾಡಿರುವ`ರಾಧೆ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿರುವ ಸಲ್ಲು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟ್ರೇಲರ್ ರಿಲೀಸ್ ಜೊತೆಗೆ ಸಲ್ಲು ಫ್ಯಾನ್ಸ್ಗೆ ಇನ್ನೊಂದು ಗುಡ್‍ನ್ಯೂಸ್ ಸಿಕ್ಕಿದೆ. ರಾಧೆ ಸಿನಿಮಾದ ರಿಲೀಸ್ ಕೂಡ ಅನೌನ್ಸ್ ಆಗಿದೆ.
ಬಾಲಿವುಡ್‍ನ ಬಹುನಿರೀಕ್ಷಿತ ಚಿತ್ರ`ರಾಧೆ’ ಚಿತ್ರವನ್ನ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದೇ ಇದೆ. ರಾಧೆ ಟ್ರೈಲರ್ ನೋಡಿರುವ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಿತ್ರದಲ್ಲಿ ಸಲ್ಲು ಎನ್‍ಕೌಂಟರ್ ಸ್ಪೆಷಲೀಷ್ಟ್ ಆಗಿ, ಜಬರ್ದಸ್ತ್ ರೋಲ್‍ನಲ್ಲಿ ಮಿಂಚಿದ್ದಾರೆ.
ಈ ಆಕ್ಷನ್ ಪ್ಯಾಕ್ ಸಿನಿಮಾದ ಮೇಲೆ ದಿನೇ ದಿನೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಮೇ 13ರಂದು ಈದ್ ಮಿಲಾದ್ ಹಬ್ಬದಂದು ಥಿಯೇಟರ್ ಮತ್ತು ಓಟಿಟಿ ಫ್ಲಾರ್ಟ್ ಫಾರ್ಮ್‍ನಲ್ಲಿ ಏಕಕಾಲದಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿರುವುದರಿಂದ ಚಿತ್ರಮಂದಿರಗಳನ್ನು ಮುಚ್ಚುವ ಆದೇಶ ಹೊರಡಿಸಲಾಗಿದೆ. ಹಾಗಾಗಿ `ರಾಧೆ’ ಚಿತ್ರತಂಡ ಓಟಿಟಿ ಮತ್ತು ಚಿತ್ರಮಂದಿರದಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡಿದೆ. ಸಲ್ಲು ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಚಿತ್ರವನ್ನ ಕಣ್ತುಂಬಿಕೊಳ್ಳಬಹುದು.
ರಾಧೆ ಸಿನಿಮಾದಲ್ಲಿ ಸಲ್ಮಾನ್ ಖಾನ್‍ಗೆ ಜೋಡಿಯಾಗಿ ದಿಶಾ ಪಠಾಣಿ ನಟಿಸಿದ್ದು, ಸಲ್ಲುಗೆ ಖಡಕ್ ವಿಲನ್‍ಯಾಗಿ ರಣ್‍ದೀಪ್ ಹೂಡಾ ಅಭಿನಯಿಸಿದ್ದಾರೆ. ಜೊತೆಗೆ ಜಾಕಿ ಶ್ರಾಫ್ ನಟಿಸಿದ್ದಾರೆ. ಬ್ಯಾಡ್ ಬಾಯ್ ಆಕ್ಷನ್ ಅವತಾರದಲ್ಲಿ ಮತ್ತೊಮ್ಮೆ ನೋಡಲು ಸಲ್ಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.