ಐಸ್ ಆಗಿದ್ದ ಆಕ್ಸಿಜನ್ ಟ್ಯಾಂಕ್: ಮೈಸೂರಿನಲ್ಲಿ ತಪ್ಪಿದ ದುರಂತ!
ಟ್ಯಾಂಕ್ ನಲ್ಲಿ ಆಕ್ಸಿಜನ್ ಮಂಜುಗಡ್ಡೆಯಾಗಿದ್ದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ತೋರಿದ ಸಮಯಪ್ರಜ್ಞೆಯಿಂದ ಮೈಸೂರಿನಲ್ಲಿ ದುರಂತವೊಂದು ತಪ್ಪಿದೆ.
ಮಂಗಳವಾರ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಆಮ್ಲಜನಕ ಟ್ಯಾಂಕ್ ಮಂಜುಗಡ್ಡೆಯಾಗಿ ಪರಿವರ್ತನೆಯಾಗಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಗಮನಕ್ಕೆ ತಂದಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಸಮಸ್ಯೆ ಬಗೆಹರಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ 800 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಸೋಂಕಿತರಿಗೆ ಆಮ್ಲಜನಕ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಇದರಿಂದ ತಕ್ಷಣಕ್ಕೆ ಆಕ್ಸಿಜನ್ ಪೂರೈಕೆ ಅಡ್ಡಿ ನಿವಾರಣೆಗೊಂಡು ದುರಂತವೊಂದು ತಪ್ಪಿದಂತಾಗಿದೆ.
0 68 Less than a minute