ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಡಬಲ್, ತ್ರಿಬಲ್ ವೇರಿಯೆಂಟ್ ಮ್ಯೂಟೆಂಟ್ (2-3 ಪಟ್ಟು ಅಪಾಯಕಾರಿ) ಕೊರೊನಾ ವೈರಸ್ ಗಿಂತ 15 ಪಟ್ಟು ಹೆಚ್ಚು ಅಪಾಯಕಾರಿಯಾದ ಕೊರೊನಾ ವೈರಸ್ ಇದೀಗ ದಕ್ಷಿಣ ಭಾರತದಲ್ಲಿ ಪತ್ತೆಯಾಗಿದೆ.
ಚೀನಾದಲ್ಲಿ 2019ರ ಡಿಸೆಂಬರ್ ನಲ್ಲಿ ಪತ್ತೆಯಾದ ಕೊರೊನಾ ಸೋಂಕು ಇದೀಗ ಹಲವಾರು ದೇಶಗಳಲ್ಲಿ ಹಲವಾರು ಪಟ್ಟು ಅಭಿವೃದ್ಧಿಯಾಗಿ ಮತ್ತಷ್ಟು ಅಪಾಯಕಾರಿ ಆಗುತ್ತಿದೆ. ಆದರೆ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಸಾರ್ಸ್ –ಕೋವಿ-2 (SARS-CoV-2) ಹಿಂದಿನ ಎಲ್ಲಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ಅಭಿವೃದ್ಧಿ ಆಗಿರುವುದನ್ನು ವೈದ್ಯರ ತಂಡ ಪತ್ತೆ ಹಚ್ಚಿದೆ.
ಪ್ರಸ್ತುತ ಭಾರತದಲ್ಲಿ ಅತ್ಯಂತ ಅಪಾಯಕಾರಿಯಾದ ಎನ್ 440 ಕೊರೊನಾ ವೈರಸ್ ಇದೀಗ ಎರಡನೇ ಅಲೆಯ ರೂಪ ಪಡೆದಿದ್ದು, ಜನರು ತತ್ತರಿಸುತ್ತಿದ್ದಾರೆ. ಪ್ರತಿ ದಿನ ಎರಡರಿಂದ ಮೂರು ಪಟ್ಟು ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಕೋಟಿ ದಾಟಿದೆ.
ಆದರೆ ಎನ್ 440 ಹೊಸ ರೂಪ ಪಡೆದು ಎನ್ 440ಕೆ ಆಗಿ ಬದಲಾಗಿದ್ದು, ಇದು 15 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ. ಇದು ಹಿಂದಿನ ಬಿ1.617 ಮತ್ತು ಬಿ1618ಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ.