ಬೆಂಗಳೂರು: ಕೋವಿಡ್ ಬಂದ ತಕ್ಷಣ ಯಾರೂ ಆತಂಕ ಪಡುವ ಅಗತ್ಯವಿಲ್ಲ, ರೋಗದ ಲಕ್ಷಣ ಇದ್ರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ, ಲಕ್ಷಣ ಇಲ್ಲದಿದ್ದವರು ಆಸ್ಪತ್ರೆಗೆ ದಾಖಲಾದ್ರೆ ಬೆಡ್ ಕೊರತೆ ಉಂಟಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಿಗೆ ಸಾಮಾನ್ಯ ಬೆಡ್ ಬುಕಿಂಗ್ ವ್ಯವಸ್ಥೆ ಜಾರಿ ಮಾಡಿದಾರೆ ಅಲೆದಾಟ ತಪ್ಪಲಿದೆ. ಬೆಡ್ ನೀಡದ 66 ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದೇವೆ, ಇನ್ನೆರಡು ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಂದ ಅಗತ್ಯವಿರುವ ಬೆಡ್ ಪಡೆಯಲಾಗುವುದು ಎಂದರು.
ಇಂದಿನಿಂದ 12 ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ತೀರ್ಮಾನಿಸಿದ್ದು, ಖಾಸಗಿ ಆಸ್ಪತ್ರೆ, ಹೋಟೆಲ್ ಗಳನ್ನ ಸಿಸಿಸಿ ಪರಿವರ್ತನೆ ಮಾಡಲು ಚಿಂತನೆ ನಡೆಸಲಾಗಿದೆ. ಐಸಿಯು ಬೆಡ್ ಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಪ್ರತ್ಯೇಕ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.