ಏನಿದು ಪಿಂಕ್​ ವಾಟ್ಸ್​ಆ್ಯಪ್​? ಕುತಂತ್ರಾಂಶಕ್ಕೆ ಬಲಿಯಾಗುವ ಮುನ್ನ ಇದನ್ನೊಮ್ಮೆ ಓದಿ..!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಮ್ಮೆಲ್ಲರ ವಾಟ್ಸ್​ ಆ್ಯಪ್​ಗೊಂದು ಸಂದೇಶ ಬರುತ್ತಿದೆ. ಪಿಂಕ್​ ವಾಟ್ಸ್​ಆ್ಯಪ್​ ಬಳಸಿ ನೂತನ ಅನುಭವ ಪಡೆಯಿರಿ ಎಂಬ ಲಿಂಕ್​ಗಳು ಹರಿದಾಡುತ್ತಿವೆ.

ಆದರೆ, ನೀವೇನಾದರೂ ಕೊಂಚ ಯಾಮಾರಿದರೂ ಸಾಕು ನಿಮ್ಮ ಮೊಬೈಲ್​ನಲ್ಲಿರುವ ಎಲ್ಲ ಮಾಹಿತಿ ತನ್ನಿಂತಾನೇ ಸೈಬರ್ ಕಳ್ಳರಿಗೆ ರವಾನೆಯಾಗುತ್ತದೆ. ಹೀಗೆ ಬರುವ ಲಿಂಕ್​ಗಳ್ಯಾವವೂ ಅಧಿಕೃತವಾಗಿ ವಾಟ್ಸ್​ಆ್ಯಪ್​ ಕಂಪನಿಯಿಂದ ಬರುವುದಿಲ್ಲ. ವಾಟ್ಸ್ಯಾಪ್​ ಬಳಕೆದಾರರ ಮಾಹಿತಿಯನ್ನು ಕದಿಯಲು ಹ್ಯಾಕರ್ಸ್​ ಈ ಕುತಂತ್ರಾಂಶವನ್ನು ಹರಿಬಿಟ್ಟಿದ್ದಾರೆ.

ಹೀಗಾಗಿ ಅಪ್ಪೀ ತಪ್ಪಿ ನೀವೇನಾದರೂ ನಿಮ್ಮ ವಾಟ್ಸ್​ಆ್ಯಪ್​ಗೆ ಬಂದ ಲಿಂಕ್​ನ್ನು ಟಚ್​ ಮಾಡಿದರೆ ನಿಮ್ಮೆಲ್ಲ ಮಾಹಿತಿ ಹ್ಯಾಕರ್ಸ್​ಗಳಿಗೆ ರವಾನೆಯಾಗುತ್ತದೆ. ಈ ಬಗ್ಗೆ ಸೈಬರ್​ ಪರಿಣಿತರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.

ಆದರೂ ಕೆಲವರು ತಮ್ಮ ವಾಟ್ಸ್​ಆ್ಯಪ್​ನ್ನು ಗುಲಾಬಿ ಬಣ್ಣಕ್ಕೆ ತಿರುಗಿಸುವ ಆಸೆಯಿಂದ ಈ ಲಿಂಕ್​ ಒತ್ತಿ ಹೈರಾಣಾಗಿದ್ದಾರೆ. ಈ ಲಿಂಕ್​ನ್ನು ಒತ್ತುತ್ತಲೇ ಅವರ ಫೋನ್​ಬುಕ್​ನಲ್ಲಿರುವ ಕಾಂಟ್ಯಾಕ್ಟ್​ಗಳಿಗೆಲ್ಲ ಪಿಂಕ್​ ವಾಟ್ಸ್​ಆ್ಯಪ್​ ಬಗೆಗಿನ ಲಿಂಕ್​ ರವಾನೆಯಾಗುತ್ತದೆ.

ಇದಾದ ಬಳಿಕ ಈ ಲಿಂಕ್​ ನಕಲಿ ಎಂದು ತಿಳಿದು ಡಿಲೀಟ್​ ಮಾಡಲು ಹೋದರೆ ಡಿಲೀಟ್​ ಆಗುತ್ತಿಲ್ಲ. ಈ ಲಿಂಕ್​ ಒಂದು ಮಾಲ್​ವೇರ್​ ತಂತ್ರಾಂಶ. ಇದರ ಮೂಲಕ ಸೈಬರ್​ ಖದೀಮರು ಸರಳವಾಗಿ ನಿಮ್ಮೆಲ್ಲ ಮಾಹಿತಿಯನ್ನು ಕದಿಯಬಲ್ಲರು. ಹೀಗಾಗಿ ಈ ಥರದ ಯಾವುದೇ ಅನಧೀಕೃತ ಲಿಂಕ್​ಗಳು ನಿಮ್ಮ ಮೊಬೈಲ್​ಗೆ ಬಂದರೆ ಅದನ್ನು ಬಳಸಬೇಡಿ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!