ವಾಷಿಂಗ್ಟನ್: ಒಂದು ಬಹುಮುಖ್ಯ ಹುದ್ದೆಗೆ ಈ ಕಂಪನಿ ಶ್ವಾನಾಧಿಕಾರಿಯ ತಲಾಶ್ನಲ್ಲಿದೆ. ಇದು ಅಚ್ಚರಿ ಎನಿಸಿದರೂ ಸತ್ಯ. ಶ್ವಾನಗಳಿಗೆಂದು ತಯಾರಿಸಲಾಗುವ ಪೇಯದ ರುಚಿ ನೋಡಲು ಮುಖ್ಯ ರುಚಿ ಪರೀಕ್ಷಾಧಿಕಾರಿ ಹುದ್ದೆಗೆ ಶ್ವಾನ ಬೇಕಾಗಿದೆ.
ಅಮೆರಿಕದ ಬುಶ್ ಬಿಯರ್ ಎಂಬ ಕಂಪನಿ ಚೀಫ್ ಟೆಸ್ಟಿಂಗ್ ಆಫಿಸರ್ ಹುದ್ದೆಗೆ ಯೋಗ್ಯ ನಾಯಿಯ ಹುಡುಕಾಟದಲ್ಲಿದೆ. ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಜಾಹೀರಾತು ಕೂಡಾ ಪ್ರಕಟಿಸಿದೆ.
ಆಲ್ಕೋಹಾಲ್-ಮುಕ್ತವಾದ ಈ ಬಿಯರ್ ರುಚಿ ನೋಡಿ ಹೇಳಲು ಸಂಬಳವಾಗಿ 20,000 ಡಾಲರ್ ಸಂಬಳ, 800 ಡಾಲರ್ ಮೌಲ್ಯದ ಸಾಕುಪ್ರಾಣಿ ವಿಮೆ ಹಾಗೂ ತಲಾ ನಾಲ್ಕು ಪ್ಯಾಕ್ಗಳ ಬುಶ್ ಡಾಗ್ ಬ್ರಯೋ ಬಿಯರ್ನ 10 ಪೊಟ್ಟಣಗಳನ್ನು ಸಂಭಾವನೆಯಾಗಿ ಕೊಡಲಾಗುವುದು ಎಂದು ಕಂಪನಿ ಘೋಷಿಸಲಾಗಿದೆ. ನಾಯಿಯ ಮಾಲೀಕರು ತಮ್ಮ ನಾಯಿಯ ಉತ್ತಮ ಫೋಟೋ ಕಳುಹಿಸಬೇಕು.
ಅವರ ನಾಯಿ ಈ ಹುದ್ದೆಗೆ ಯಾಕೆ ತಮ್ಮ ನಾಯಿ ಬೆಸ್ಟ್ ಕ್ಯಾಂಡಿಡೇಟ್ ಅನ್ನೋದನ್ನು ತಿಳಿಸಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನಾಂಕವಾಗಿದೆ. ಈ ಸುದ್ದಿ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶ್ವಾನಾಧಿಕಾರಿಯ ಬಗ್ಗೆಯೇ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ.