ವೆಲ್ಲಿಂಗ್ಟನ್: ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಹೀಗಾಗಿ ಭಾರತೀಯರ ಪ್ರವೇಶಕ್ಕೆ ತಾತ್ಕಾಲಿ ನಿಷೇಧ ಹೇರಿ ನ್ಯೂಜಿಲ್ಯಾಂಡ್ ಸರ್ಕಾರ ಆದೇಶಿಸಿದೆ. ಏ.28ರವರೆಗೆ ಭಾರತೀಯ ಪ್ರಯಾಣಿಕರಿಗೆ ನ್ಯೂಜಿಲ್ಯಾಂಡ್ ನಿಷೇಧ ಹೇರಿದೆ.
ಇದೊಂದು ಮುಂಜಾಗೃತಾ ಕ್ರಮವಾಗಿದ್ದು, ತಾತ್ಕಾಲಿಕವಾಗಿ ಪ್ರಯಾಣಿಕರ ಆಗಮನಕ್ಕೆ ನಿರ್ಬಂಧ ವಿಧಿಸುವ ಮೂಲಕ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಾಧ್ಯ ಎಂದು ಪ್ರಧಾನಿ ಜೆಸಿಂಡಾ ಆರ್ಡೆರ್ನ್ ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ನಲ್ಲಿ ಪತ್ತೆಯಾಗಿರುವ 23 ಹೊಸ ಕೋವಿಡ್ ಪ್ರಕರಣಗಳ ಪೈಕಿ 17 ಸೋಂಕಿತರು ಭಾರತದಿಂದ ಆಗಮಿಸಿದ್ದವರಾಗಿದ್ದರು. ಹೀಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.