ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮುಂದಿನ ನಡೆ ಏನು ಎಂಬ ಬಗ್ಗೆ ಉತ್ತರ ಸಿಕ್ಕಿದೆ. ಕಾಂಗ್ರೆಸ್ ಸೇರುತ್ತಾರಾ, ಕಾಂಗ್ರೆಸ್ ಗೆ ಚುನಾವಣಾ ಸಲಹೆಗಾರರಾಗಿ ಕೆಲಸ ಮಾಡುತ್ತಾರೋ ಅಥವಾ ತಮ್ಮದೇ ಪಕ್ಷ ರಚನೆ ಮಾಡುತ್ತಾರೋ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ರಾಜಕೀಯ ಪಕ್ಷ ಕಟ್ಟುವ ಆತುರದಲ್ಲಿಲ್ಲ.
ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು, ಜನರ ನಾಡಿಮಿಡಿತ ತಿಳಿಯಲು ಬಿಹಾರವನ್ನು ದಾಟಿ 3, 000 ಕಿಮೀ ಉದ್ದದ ‘ಪಾದಯಾತ್ರೆ’ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಅವರ ಮುಂದಿನ ನಡೆಯ ಊಹಾಪೋಹಗಳ ಮಧ್ಯೆ, 17,500-18,000 ಜನರಿಂದ ಅಭಿಪ್ರಾಯ ಸಂಗ್ರಹಿಸಲು ಪಾದಯಾತ್ರೆ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮುಂದಿನ 3-4 ತಿಂಗಳಲ್ಲಿ ‘ಜನ್ ಸೂರಜ್’ ಚಿಂತನೆಯೊಂದಿಗೆ ಜನರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಪಶ್ಚಿಮ ಚಂಪಾರಣ್‌ನಿಂದ ತಮ್ಮ ‘ಪಾದಯಾತ್ರೆ ಪ್ರಾರಂಭಿಸಿ ಒಂದು ವರ್ಷದಲ್ಲಿ ಬಿಹಾರ ದಾಟುತ್ತೇನೆ. ಬಿಹಾರದ ಸಮಸ್ಯೆಗಳಿಗೆ ಸಂಬಂಧಿಸಿರುವ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಬದಲಾವಣೆಗಳನ್ನು ತರುವ ಸಾಮರ್ಥ್ಯ ಮತ್ತು ಉತ್ಸಾಹವನ್ನು ಹೊಂದಿರುವ ಜನರನ್ನು ಭೇಟಿ ಮಾಡಲಿದ್ದೇನೆ ಎಂದಿದ್ದಾರೆ. ಇದನ್ನು ಓದಿ :- ಪರೀಕ್ಷಾ ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್ ಎಕ್ಸ್ ಪರ್ಟ್ – ಹೆಚ್ ಡಿ ಕುಮಾರಸ್ವಾಮಿ..!