ಗರ್ಭಿಣಿಯನ್ನು ಆಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಳ್ಳದ ಕಾರಣ ಆಸ್ಪತ್ರೆ ಮುಂಭಾಗವೇ ಹೆರಿಗೆ ಆಗಿ ಮಗು ಮೃತಪಟ್ಟ ಮನಕಲಕುವ ಘಟನೆ ಮಂಡ್ಯ ಜಿಲ್ಲಾಸ್ಪತ್ರೆ ಮುಂಭಾಗ ಸಂಭವಿಸಿದೆ.
ಮಂಗಳವಾರ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ಸೋನು ಎಂಬ ಮಹಿಳೆಯನ್ನು ಕೊವಿಡ್ ರಿಪೋರ್ಟ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಂಡಿಲ್ಲ.
ಶುಕರವಾರ ಕೂಡ 2 ಗಂಟೆ ಕಾದರೂ ದಾಖಲು ಮಾಡಿಕೊಂಡಿರಲಿಲ್ಲ. ಇದರಿಂದ ಆಸ್ಪತ್ರೆ ಮುಂಭಾಗವೇ ಕಾದು ನಿಂತಿದ್ದ ಮಹಿಳೆಗೆ ನಿಂತಲ್ಲಿಯೇ ಹೆರಿಗೆ ಆಗಿದ್ದು, ಕೆಳಗೆ ಬಿದ್ದ ಮಗು ಮೃತಪಟ್ಟಿದೆ.
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಮಗು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
7 ತಿಂಗಳು ತುಂಬಿದ್ದರೂ ಮಗು ಹೃದಯಬಡಿತ ಕೇಳುತ್ತಿಲ್ಲ. ಆದ್ದರಿಂದ ಆಸ್ಪತ್ರೆಗೆ ದಾಖಲಾಗುವಂತೆ ಮಹಿಳೆಗೆ ನಿನ್ನೆಯೇ ಸೂಚಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂದು ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಪೋಷಕರನ್ನೇ ದೂರಿದೆ.