ಆಂಧ್ರಪ್ರದೇಶದ ಕೊರೊನಾ ಸೋಂಕಿತರಿಗೆ ಅನುಕೂಲ ಮಾಡಿಕೊಡಲು ಬಹುಭಾಷಾ ನಟ ಚಿರಂಜೀವಿ ಆಕ್ಸಿಜನ್ ಬ್ಯಾಂಕ್ ತೆರೆದಿದ್ದಾರೆ.
ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಅಲ್ಲದೇ ಆಕ್ಸಿಜನ್ ಬ್ಯಾಂಕ್ ತೆರೆಯಲಾಗಿದ್ದು, 7 ಜಿಲ್ಲೆಗಳಲ್ಲಿ ಈ ಬ್ಯಾಂಕ್ ಸೇವೆ ಸಲ್ಲಿಸಲಿದೆ. ಬ್ಯಾಂಕ್ ನಲ್ಲಿ ಆಕ್ಸಿಜನ್ ಕನ್ಸಟ್ರೇಟರ್ಸ್, ಔಷಧ ಸೇರಿದಂತೆ ವೈದ್ಯಕೀಯ ಸೌಲಭ್ಯಗಳು ಇರಲಿವೆ.
ಚಿರಂಜೀವಿ ಪುತ್ರ ರಾಮ್ ಚರಣ್ ಆಕ್ಸಿಜನ್ ಬ್ಯಾಂಕ್ ಕಾರ್ಯ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಅನಂತಪುರ, ಗುಂಟೂರು ಜಿಲ್ಲೆಗಳಲ್ಲಿ ಪ್ರಾರಂಭಿಕ ಹಂತವಾಗಿ ಸಿಲಿಂಡರ್ ಗಳ ಪೂರೈಕೆ ಆಗಲಿದೆ.
ಕಾರ್ಯಾಚರಣೆ ಆರಂಭವಾಗಿದೆ. ಆಕ್ಸಿಜನ್ ಕೊರತೆಯಿಂದ ಸಾವಿನ ಪ್ರಕರಣಗಳು ಇನ್ನು ಮುಂದೆ ಸಂಭವಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಚಿರಂಜೀವಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.