ರೈತರ ಗುಂಪೊಂದು ಬಿಜೆಪಿ ಶಾಸಕನ ಮೇಲೆ ಕಪ್ಪು ಮಸಿ ಬಳಿದು, ಬಟ್ಟೆ ಹರಿದುಹಾಕಿ ಥಳಿಸಿದ ಘಟನೆ ಪಂಜಾಬ್ ನ ಮುಕ್ತ್ ಸರ್ ಜಿಲ್ಲೆಯಲ್ಲಿ ನಡೆದಿದ್ದು ವೀಡಿಯೋ ವೈರಲ್ ಆಗಿದೆ.
ಸುದ್ದಿಗೋಷ್ಠಿ ನಡೆಸಲು ಬಿಜೆಪಿಗೆ ಕಚೇರಿಗೆ ಬರುತ್ತಿದ್ದ ಬಿಜೆಪಿ ಅಬ್ರೊರ್ ಶಾಸಕ ಅರುಣ್ ನಾರಂಗ್ ಅವರನ್ನು ಸುತ್ತುವರಿದ ರೈತರ ಗುಂಪು ಹಲ್ಲೆ ನಡೆಸಿದೆ.
ಬಿಜೆಪಿ ಕಚೇರಿಗೆ ಬರುವುದನ್ನು ಕಾಯುತ್ತಿದ್ದ ರೈತರ ಗುಂಪು ಅರುಣ್ ನಾರಂಗ್ ಬರುತ್ತಿದ್ದಂತೆ ಅವರ ಮೇಲೆ ಮಸಿ ಅವರ ಕಾರನ್ನು ಧ್ವಂಸಗೊಳಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಅವರನ್ನು ಸಮೀಪದ ಅಂಗಡಿಗೆ ಕರೆದೊಯ್ದು ಹೊಸ ಬಟ್ಟೆ ಖರೀದಿಸಿ ಕೊಡಿಸಿದರು.
ಆದರೆ ಶಾಸಕ ಬರುತ್ತಿದ್ದಂತೆ ಮತ್ತೆ ದಾಳಿ ಮಾಡಿದ ರೈತರು ಬಟ್ಟೆಯನ್ನು ಹರಿದು ಹಾಕಿ ಶಾಸಕನ ಮೇಲೆ ಹಲ್ಲೆ ನಡೆಸಿದರು. ನಂತರ ಪೊಲೀಸರು ಅವರನ್ನು ಸುರಕ್ಷಿತವಾಗಿ ಕರೆದೊಯ್ದರು.