545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಪುಕರಣ ಹಿನ್ನೆಲೆ ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಧಾರವಾಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಇಸ್ಮಾಯಿಲ್ ನನ್ನ ಬಂಧನ ಮಾಡಲಾಗಿದೆ.
ಇನ್ ಸರ್ವೀಸ್ ಕೋಟಾದಲ್ಲಿ ಇಸ್ಮಾಯಿಲ್ ಜಮಾದಾರ್ ಆಯ್ಕೆಯಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ಕಳೆದ ರಾತ್ರಿ ಇಸ್ಮಾಯಿಲ್ ಜಮಾದಾರ್ ನನ್ನ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆ, ಸಿಐಡಿ ಪೊಲೀಸರಿಂದ ಸೆರೆ ಹಿಡಿಯಲಾಗಿದೆ. ಇಸ್ಮಾಯಿಲ್ ಜಮಾದಾರ್ ಸೇರಿ 6 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಸಿಐಡಿ ಡಿವೈಎಸ್ಪಿ ಪುಕಾಶ್ ರಾಠೋಡ್ ಠಾಣೆಗೆ ದೂರು ನೀಡಿದ್ದರು. ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪುಕರಣ ದಾಖಲಾಗಿತ್ತು. ಪಿಸಿ ಇಸ್ಮಾಯಿಲ್ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. DAR ಕಾನ್ಸ್ಟೇಬಲ್ ಇಸ್ಮಾಯಿಲ್ ಜಮಾದಾರ್ಗಾಗಿ ಸಿಐಡಿ ಶೋಧ ನಡೆಸಿದ್ದರು
ಇದನ್ನೂ ಓದಿ : – ನಂದಿ ಗಿರಿಧಾಮಕ್ಕೆ ಹರಿದು ಬರುತ್ತಿರುವ ಜನ ಸಾಗರ – ಬೆಟ್ಟದ ಮೇಲೆ ಹೊಗಲಾಗದೆ ಕೆಳಗೂ ಬರಲಾಗದೆ ಪ್ರವಾಸಿಗರ ಪರದಾಟ