ಬೆಂಗಳೂರು: ಚಿತ್ರಮಂದಿರಗಳಿಗೆ 50 ಪರ್ಸೆಂಟ್‍ಗೆ ಮಾತ್ರ ಅವಕಾಶ ಅನ್ನೋ ರೂಲ್ಸ್ ಜಾರಿ ಮಾಡಿರೋ ಕುರಿತು, ಇಂದು ನಟ ಪುನಿತ್ ರಾಜ್‍ಕುಮಾರ್,ನಿರ್ದೇಶಕ ಸಂತೋಷ್ ಆನಂದ್ ರಾಮ್,ನಿರ್ಮಾಪಕ ವಿಜಯ್ ಕಿರಗಂದೂರ್, ವಿತರಕ ಕಾರ್ತಿಕ್ ಗೌಡ, ಸೇರಿದಂತೆ ಯುವರತ್ನ ಚಿತ್ರತಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನ ಭೇಟಿ ಮಾಡಿದ್ದಾರೆ.
50ಪರ್ಸೆಂಟ್ ಟಿಕೆಟ್ ವ್ಯವಸ್ಥೆ ಮಾಡಿದ್ರೆ ಚಿತ್ರಗಳಿಗೆ ತುಂಬಾ ಲಾಸ್ ಆಗತ್ತೆ, ದಯವಿಟ್ಟು ಮೊದಲಿನಂತೆ ನಮಗೆ ಚಿತ್ರಮಂದಿರ ಭರ್ತಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಯುವರತ್ನ ಸಿನಿಮಾ ಇದೇ ಏಪ್ರಿಲ್ ಒಂದಕ್ಕೆ ರಿಲೀಸ್ ಆಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ಶೇ.50ರಷ್ಟು ಆಸನಕ್ಕೆ ಅವಕಾಶ ನೀಡುವ ಕುರಿತು ನಟ ಪವರ್‍ಸ್ಟಾರ್ ಪುನೀತ್ ಫೇಸ್‍ಬುಕ್ ಲೈವ್ ಬಂದು ಸರ್ಕಾರಕ್ಕೆ ಮನವಿ ಮಾಡಿದ್ರು. ಜೊತೆಗೆ ಅಭಿಮಾನಿಗಳ ಜೊತೆ ಮಾತುಕತೆ ಮಾಡಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ಪಡೆದ್ರು.