ಮುಂದಿನ ತಿಂಗಳು ಪುರಿಯಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಜಗನ್ನಾಥ ರಥೋತ್ಸವ ಕೋವಿಡ್ ನಿಯಮದ ಹಿನ್ನೆಲೆಯಲ್ಲಿ ಭಕ್ತರಿಲ್ಲದೇ ನಡೆಯಲಿದೆ. ಈ ಮೂಲಕ ಸತತ 2ನೇ ವರ್ಷ ಭಕ್ತರಿಲ್ಲದೇ ರಥೋತ್ಸವ ನಡೆಯಲಿದೆ.
ಒಡಿಶಾದ ಭುವನೇಶ್ವರದಲ್ಲಿ ಪ್ರತಿವರ್ಷ ನಡೆಯುವ ಪುರಿ ಜಗನ್ನಾಥ ರಥೋತ್ಸವಕ್ಕೆ ವಿಶ್ವಾದ್ಯಂತ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದರು. ಆದರೆ ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ಭಕ್ತರಿಲ್ಲದೇ ರಥೋತ್ಸವ ಬಣಗುಡುತ್ತಿದೆ. ಒಡಿಶಾ ವಿಶೇಷ ಪರಿಹಾರ ಕಮಿಷನರ್ ಪಿ.ಕೆ. ಜೆನಾ ಈ ವಿಷಯವನ್ನು ಗುರುವಾರ ಪ್ರಕಟಿಸಿದ್ದು, ರಥೋತ್ಸವ ಪ್ರಕ್ರಿಯೆ ಮತ್ತು ಪೂಜೆಯಲ್ಲಿ ಲಸಿಕೆ ಪಡೆವರು ಮತ್ತು ಕೋವಿಡ್ ನೆಗೆಟಿವ್ ವರದಿ ಪಡೆದವರು ಮಾತ್ರ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು.