ಇಂದಿನಿಂದ ಕ್ವಾಡ್ ಶೃಂಗಸಭೆ- ಟೋಕಿಯೋದಲ್ಲಿ ಮೋದಿಗೆ ಆತ್ಮೀಯ ಸ್ವಾಗತ

ಭಾರತ, ಅಮೆರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ಕ್ವಾಟ್ ಕೂಡದ ಮಹತ್ವದ ಸಭೆ ಇಂದು ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಜಪಾನ್’ನ ಟೋಕಿಯೋಗೆ ಭೇಟಿ ನೀಡಿದ್ದಾರೆ.

ಕ್ವಾಡ್‌ ಶೃಂಗಸಭೆ: ಟೋಕಿಯೋದಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಮೋದಿಯವರಿಗೆ ಜಪಾನ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿದರು. ಮೇ 24 ರಂದು ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ಶೃಂಗದಲ್ಲಿ ಮೋದಿ ಮಾತ್ರವಲ್ಲದೇ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಆಸ್ಟ್ರೇಲಿಯಾದ ನಿಯೋಜಿತ ಆಂಥೋನಿ ಅಲ್ಬನೀಸ್ ಭಾಗವಹಿಸಲಿದ್ದಾರೆ.

ಇಂದಿನಿಂದ ಕ್ವಾಡ್ ಶೃಂಗಸಭೆ: ಟೋಕಿಯೋದಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ- Kannada  Prabha

ಜಪಾನ್ಗೆ ತೆರಳುವುದಕ್ಕೂ ಮುನ್ನಾ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿಯವರು, ಜಪಾನ್ನಲ್ಲಿನ ಎರಡನೇ ವ್ಯಕ್ತಿಗತ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ, ನಾಲ್ಕು ದೇಶಗಳ ನಾಯಕರಿಗೆ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲು ಮತ್ತು ಇಂಡೋ-ಪೆಸಿಫಿಕ್ನಲ್ಲಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಕ್ವಾಡ್ ಅವಕಾಶವನ್ನು ಒದಗಿಸುತ್ತದೆ. ನಾವು ಪ್ರಾದೇಶಿಕ ಬೆಳವಣಿಗೆಗಳು ಮತ್ತು ಸಮಕಾಲೀನ ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಮಾತುಕತೆಗಳನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ : –  ಇಂಧನ ದರ ಇಳಿಕೆ – ಭಾರತವನ್ನು ಹೊಗಳಿದ ಇಮ್ರಾನ್ ಖಾನ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!