ಬೆಂಗಳೂರು: ರಾಹುಲ್ ದ್ರಾವಿಡ್, ಭಾರತ ಕಂಡ ಅಪರೂಪದ ಆಟಗಾರರಲ್ಲಿ ಒಬ್ಬರು. ರಾಹುಲ್ ದ್ರಾವಿಡ್ರ ಶಾಂತ, ಸೌಮ್ಯ ಸ್ವಭಾವಕ್ಕೆ ಮನಸೋತವರೇ ಹೆಚ್ಚು.ಆದರೆ ರಾಹುಲ್ ದ್ರಾವಿಡ್ ಸಿಟ್ಟು ಮಾಡಿಕೊಂಡು ಕೂಗಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಅರೆ, ರಾಹುಲ್ ದ್ರಾವಿಡ್ ಅವರಿಗೂ ಕೋಪ ಬರುತ್ತದಾ ಎಂದು ಹುಬ್ಬೇರಿಸಬೇಡಿ. ರಾಹುಲ್ ದ್ರಾವಿಡ್ ಕೋಪ ಮಾಡಿಕೊಂಡ ವಿಡಿಯೋದ ಹಿಂದಿರುವ ಅಸಲಿಯತ್ತೇ ಬೇರೆ. ಕ್ರೆಡ್ ಕಂಪನಿ ಬಿಡುಗಡೆ ಮಾಡಿರುವ ಹೊಸ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಅವರು ಕೋಪ ಮಾಡಿಕೊಳ್ಳುವ ಸನ್ನಿವೇಶಗಳಲ್ಲಿ ನಟಿಸಿದ್ದಾರೆ.
ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡಿರುವ ರಾಹುಲ್ ದ್ರಾವಿಡ್ ಕೋಪದಲ್ಲಿ ಸುತ್ತಲಿನವರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸುವ ಸನ್ನಿವೇಶ ಸಖತ್ ವೈರಲ್ ಆಗಿದೆ. ಇನ್ನು ಈ ಜಾಹೀರಾತಿನಲ್ಲಿ ರಾಹುಲ್ ಕನ್ನಡವನ್ನೂ ಮಾತನಾಡಿದ್ದಾರೆ.
ಮಧ್ಯಪ್ರದೇಶ ಮೂಲದವರಾದವರೂ ರಾಹುಲ್ ದ್ರಾವಿಡ್ ಅವರು ಕನ್ನಡಿಗರು. ಅಲ್ಲದೇ ಕನ್ನಡ, ಕರ್ನಾಟಕದ ಮೇಲೆ ಹೆಚ್ಚಿನ ಗೌರವವನ್ನು ಹೊಂದಿರುವವರು. ಈ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ರ ಬಾಯಲ್ಲಿ ಕನ್ನಡ ಕೇಳುವುದೇ ಚಂದ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಇನ್ನು ರಾಹುಲ್ ದ್ರಾವಿಡ್ರ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಸಾಕಷ್ಟು ಜನ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿದ ಕ್ರಿಕೆಟಿಗ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ರ ಇಂಥ ರೂಪವನ್ನು ಈ ಮೊದಲು ನಾವು ನೋಡಿರಲಿಲ್ಲ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.