ಆರ್ ಸಿಬಿಗೆ 1 ರನ್ ರೋಚಕ ಜಯ: ಕೊನೆ ಓವರ್ ನಲ್ಲಿ ಡೆಲ್ಲಿಗೆ ಶಾಕ್

ನಾಯಕ ರಿಷಭ್ ಪಂತ್ ಮತ್ತು ಶೆರ್ಮನ್ ಹೆಟ್ಮೆಯರ್ ಅವರ ಅರ್ಧ ಶತಕಗಳ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯಲ್ಲಿ ಅಗ್ರಸ್ಥಾನಕ್ಕೆ ಮರಳಿ ಲಗ್ಗೆ ಹಾಕಿದೆ.

ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಗೆ 171 ರನ್ ಕಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯಿತು.

ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ತಂಡ ಒಂದು ಹಂತದಲ್ಲಿ 92 ರನ್ ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ನಾಯಕ ರಿಷಭ್ ಪಂತ್ ಮತ್ತು ಶೆರ್ಮನ್ ಹೆಟ್ಮೆಯರ್ ಮುರಿಯದ 5ನೇ ವಿಕೆಟ್ ಗೆ 78 ರನ್ ಪೇರಿಸಿದರು.

ಹೇಟ್ಮೆಯರ್ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ 53 ರನ್ ಸಿಡಿಸಿದರೆ, ರಿಷಭ್ ಪಂತ್ 48 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 58 ರನ್ ಬಾರಿಸಿ ಔಟಾಗದೇ ಉಳಿದರು.

ಮೊಹಮದ್ ಸಿರಾಜ್ ಎಸೆದ ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಆದರೆ ಡೆಲ್ಲಿ 13 ರನ್ ಗಳಿಸಿದರೂ ಒಂದು ರನ್ ಗಳಿಸಲಷ್ಟೇ ಶಕ್ತವಾಯಿತು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!