ರೆಡಿಯೋ ಜಾಕಿಯಾಗಿ ಜನಪ್ರಿಯತೆ ಪಡೆದಿದ್ದ ಆರ್ ಜೆ ರಚನಾ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಜೆಪಿ ನಗರದ ಪ್ಲಾಟ್ ನಲ್ಲಿ ರಚನಾಗೆ ಸೋಮವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅರ್ ಜೆ ಕೆಲಸ ತೊರೆದಿದ್ದ ರಚನಾ ತಂದೆತಾಯಿ ಜೊತೆ ಚಾಮರಾಜಪೇಟೆಯಲ್ಲಿ ವಾಸವಿದ್ದರು.
ರಚನಾ ಪಾರ್ಥೀವ ಶರೀರವನ್ನು ಚಾಮರಾಜಪೇಟೆ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಂತಿಮ ಸಂಸ್ಕಾರ ಇಂದೇ ಮಾಡುವ ಸಾಧ್ಯತೆ ಇದೆ.