ಉದ್ಯಮಿ ರಾಬರ್ಟ್ ವಾದ್ರಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಪತ್ನಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದು, ಐಸೋಲೇಷನ್ ಗೆ ಒಳಗಾಗಿದ್ದಾರೆ.
ರಾಬರ್ಟ್ ವಾದ್ರಾ ಶುಕ್ರವಾರ ಫೇಸ್ ಬುಕ್ ನಲ್ಲಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಪ್ರಿಯಾಂಕಾ ವಾದ್ರಾಗೆ ನೆಗೆಟಿವ್ ಬಂದಿದ್ದರೂ ಕೊರೊನಾ ನಿಯಮದ ಪ್ರಕಾರ ಇಬ್ಬರೂ ಐಸೋಲೇಷನ್ ಗೆ ಒಳಗಾಗಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.