ಸಾಹಿತಿ ವೀರಭದ್ರಪ್ಪ ಸೇರಿ 61 ಜನರಿಗೆ ಬೆದರಿಕೆ ಪತ್ರ

ಸಾಹಿತಿ ಕುಂ. ವೀರಭದ್ರಪ್ಪ(VEERABHADRAPPA ) ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ . ಸಾಹಿತಿ ವೀರಭದ್ರಪ್ಪ , ನಟ ಪ್ರಕಾಶ್ ರೈ, ಸೇರಿದಂತೆ ಓಟ್ಟು 61 ಜನರಿಗೆ ಬೆದರಿಕೆ ಪತ್ರ ಬಂದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಸಾಹಿತಿ ವೀರಭದ್ರಪ್ಪ ಮನೆಗೆ ಮತ್ತೊಂದು ಬೆದರಿಕೆ ಪತ್ರ ಬಂದಿತ್ತು . ಮೊದಲನೇಯ ಪತ್ರ ಭದ್ರಾವತಿಯಿಂದ ಬಂದರೆ, ಎರಡನೇಯ ಪತ್ರ ಚಿತ್ರದುರ್ಗದಿಂದ ಬಂದಿದೆ . ಈ ಹಿಂದೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್ಡಿಕೆ ಸೇರಿದಂತೆ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು . ಇದನ್ನೂ ಓದಿ : – ದಾವೋಸ್ ಪ್ರವಾಸಕ್ಕೆ ತೆರಳುವ ವಿಚಾರ ಇಂದು ತೀರ್ಮಾನ ಮಾಡ್ತೀವಿ – ಸಿಎಂ ಬೊಮ್ಮಾಯಿ

ಈ ಬಾರಿಯೂ ವೀರಭದ್ರಪ್ಪ ಸೇರಿದಂತೆ ಮಾಜಿ ಸಿಎಂ ಗಳಾದ ಎಚ್ಡಿಕೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಶ್ರೀ, ಬಿಕೆ ಹರಿಪ್ರಸಾದ್, ಪ್ರಕಾಶ್ ರೈ, ದಿನೇಶ್ ಗುಂಡೂರಾವ್ ಸೇರಿದಂತೆ 61 ಜನರಿಗೆ ಬೆದರಿಕೆ ಪತ್ರ ಬಂದಿದೆ . ನೀವು ಪೇಪರ್ ಹಿರೋ ಆಗಲು ಹೊರಟಿದ್ದೀರಿ ಅಂತ ಪತ್ರದಲ್ಲಿ ಹೇಳಲಾಗಿದೆ . ಮೊದಲ ಬಾರಿ ಪತ್ರ ಬಂದಾಗ, ವಿಜಯನಗರ ಎಸ್ಪಿಯಾದ ಡಾ. ಅರುಣ್ ಕೆ. ಅವರಿಗೆ ಭೇಟಿಯಾಗಿ ರಕ್ಷಣೆ ನೀಡಲು ವೀರಭದ್ರಪ್ಪ ಮನವಿ ಮಾಡಿದ್ದರು. ಇದನ್ನೂ ಓದಿ : – ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!