ಟಾಲಿವುಡ್ ಕ್ಯೂಟ್ ಬ್ಯೂಟಿ ಸಮಂತಾ ರಾತ್ ಪ್ರಭು (SAMANTHARUTHPRABHU) ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೂ ಅವಕಾಶ ಮಾಡಿಕೊಂಡು ತಮ್ಮ ಸಿನಿ ಜರ್ನಿಯಲ್ಲಿ ಜೊತೆಗಿದ್ದ ತಾರೆಯರನ್ನು ನೆನೆಪಿಸಿಕೊಳ್ಳುತ್ತಿರುತ್ತಾರೆ.
ಈ ಹಿನ್ನೆಲೆ ಇಂದು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ(VIJAYA DEVARAKONDA ) ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರೊಂದಿಗೆ ನಟಿಸುತ್ತಿರುವ ಸಮಂತಾ ಅವರು ನಟನ ಜೊತೆಗಿನ ಮುದ್ದಾದ ಫೋಟೋ ಶೇರ್ ಮಾಡಿಕೊಂಡಿದ್ದು, ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಸಮಂತಾ ಟ್ವೀಟ್ನಲ್ಲಿ ‘ನಂಬಲಾಗದಷ್ಟು ಸ್ಪೂರ್ತಿದಾಕಯ ವ್ಯಕ್ತಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವರಮೂಲಕ ದೇಕೊಂಡ ಅವರ ವ್ಯಕ್ತಿತ್ವ ಬೇರೆಯವರಿಗೆ ಸ್ಪೂರ್ತಿ ನೀಡುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : – ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕ ಚೋಪ್ರ- ನಿಕ್ ಜೊನಸ್