ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಆಸರೆ ಎನ್ನುವ ಹೆಸರಿನಲ್ಲಿ ನಿತ್ಯ ನೂರಾರು ಜನರಿಗೆ ಆಹಾರವನ್ನ ಅವರು ಇದ್ದಲ್ಲಿಗೆ ಹೋಗಿ ನೀಡುತ್ತಿದ್ದಾರೆ.
ಅಭಿಮಾನಿಗಳ ಈ ಕಾರ್ಯಕ್ಕೆ ಸಾಥ್ ನೀಡಿರುವ ನಟ ಶಿವರಾಜ್ಕುಮಾರ್ ಈ ಮೂಲಕ ನಗರದಲ್ಲಿರುವ ಬಡ ಕುಟುಂಬಗಳಿಗೆ, ಹಸಿದ ಹೊಟ್ಟೆಗೆ ಕೈ ತುತ್ತು ನೀಡುತ್ತಿದ್ದಾರೆ.
ಪ್ರತಿದಿನ ಕೊರೊನಾ ಮಹಾಮಾರಿ ಎರಡನೇ ಅಲೆ ಶುರುವಾದ ದಿನದಿಂದಲೂ ಶಿವಣ್ಣನ ಬಾಯ್ಸ್ ಸ್ವತಃ ಅಡುಗೆಯನ್ನ ತಯಾರಿಸಿ ಖುದ್ದಾಗಿ ಸಂಚರಿಸಿ ಹಸಿದವರಿಗೆ ನಿರಾಶ್ರಿತರಿಗೆ, ಆಹಾರದ ಅವಶ್ಯಕತೆ ಇದ್ದವರಿಗೆ ಆಹಾರ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಇದೀಗ ಸ್ಯಾಂಡಲ್ ವುಡ್ನ ನಟರು, ನಟಿಯರು, ನಿರ್ದೇಶಕರುಗಳು ಸಹಾಯ ಮಾಡುತ್ತಿದ್ದಾರೆ. ಇಂತಹ ಕಾರ್ಯಗಳಿಂದ ರೀಲ್ ನಲ್ಲಿ ಮಾತ್ರವಲ್ಲದೇ ರಿಯಲ್ ನಲ್ಲೂ ಹೀರೋ ಆಗಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.