ಕೋವಿಶೀಲ್ಡ್ ಲಸಿಕೆಗೆ ಸರಕಾರಿ ಆಸ್ಪತ್ರೆಗಳಿಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ. ದರ ನಿಗದಿಪಡಿಸಿ ಸೆರಮ್ ಇನ್ಸಿಟಿಟ್ಯೂಟ್ ಘೋಷಿಸಿದೆ.
ಬುಧವಾರ ಸೆರೆಮ್ ಇನ್ಸಿಟಿಟ್ಯೂಟ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೊರೊನಾ ಲಸಿಕೆಯಾದ ಕೋವಿಶೀಲ್ಡ್ ಒಟ್ಟಾರೆ ಉತ್ಪಾದನೆಯ ಶೇ.50ರಷ್ಟು ಕೇಂದ್ರ ಸರಕಾರಕ್ಕೆ ಹಾಗೂ ಶೇ.50ರಷ್ಟನ್ನು ರಾಜ್ಯ ಸರಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದೆ.
ರಾಜ್ಯ ಸರಕಾರಿ ಆಸ್ಪತ್ರೆಗಳಿಗೆ ಒಂದು ಡೋಜ್ ಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಅಮೆರಿಕದ ಲಸಿಕೆಗಳಿಗೆ ಪ್ರಸ್ತುತ 1500 ರೂ. ಹಾಗೂ ರಷ್ಯಾದ ಲಸಿಕೆಗೆ 750 ರೂ. ದರ ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ ಕೋವಿಶೀಲ್ಡ್ ಕಡಿಮೆ ದರವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.