ರಾಯಚೂರು ನಗರದ ರಾಂಪುರ ಜಲಾಶಯದ ಬಳಿ ಇರುವಂತಹ ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಚಿವ ಶಂಕರ್ ಮುನೇನ ಕೊಪ್ಪ ಅವರು ಸ್ವತಃ ಶುದ್ದೀಕರಣ ಘಟಕದ ನೀರು ಕುಡಿದು ಜನರ ಆತಂಕ ದೂರ ಮಾಡುವ ಪ್ರಯತ್ನ ಮಾಡಿದರು.
ಕಲುಷಿತ ನೀರು ಪೂರೈಕೆ ಆಗಿರುವ ಹಿನ್ನೆಲೆಯಲ್ಲಿ ಐದು ಜನ ಮೃತಪಟ್ಟ ಕಾರಣ ಇಂದು ಜಿಲ್ಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ನಗರದ ರಾಂಪುರ ಗ್ರಾಮದಲ್ಲಿ ಇರುವ ಕುಡಿಯುವ ನೀರಿನ ಕೆರೆ ಮತ್ತು ಶುದ್ದಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಶುದ್ದೀಕರಣ ಘಟಕದಲ್ಲಿ ಲೋಪ ಆಗಿರೋದನ್ನ ಒಪ್ಪಿಕೊಂಡ ಸಚಿವ ಶಂಕರ್ ಮುನೇನಕೊಪ್ಪ ಅವರು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನು ಓದಿ :- ಮಕ್ಕಳಿಗೆ ಕೋವಿಡ್ ಬಂದ ತಕ್ಷಣ ಏನು ಆಗೋದಿಲ್ಲ – ಡಾ. ಕೆ ಸುಧಾಕರ್
ಈ ವೇಳೆ ಜನರ ಆತಂಕ ದೂರ ಮಾಡಲು ಸ್ವತಃ ಸ್ವತಃ ಶುದ್ದೀಕರಣ ಘಟಕದ ನೀರು ಕುಡಿದು ಶುದ್ದೀಕರಣ ಘಟಕ ದುರಸ್ತಿ ಯಾಗಿರುವ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಿದರು. ಸಚಿವರ ಭೇಟಿ ವೇಳೆ ಶಾಸಕ ಶಿವರಾಜ್ ಪಾಟೀಲ್ ಹಾಗೂ ನಗರಸಭೆ ಅಧ್ಯಕ್ಷರು, ಉಪಾದ್ಯಕ್ಷರು ಮತ್ತು ಸದಸ್ಯರು, ಅಧಿಕಾರಿಗಳು ಸಾಥ್ ನೀಡಿದರು.
ಇದನ್ನು ಓದಿ :- ಡ್ರಗ್ಸ್ ಕೇಸ್ – ಕಪೂರ್ ಗೆ ಸ್ಟೇಷನ್ ಬೇಲ್