ದೇಶದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ರೈಲ್ವೆ ಪೊಲೀಸರ ನೆರವಿನೊಂದಿಗೆ ಬೆಂಗಳೂರಿನ 5 ಸಾವಿರ ಜನರ ಹೊಟ್ಟೆ ತುಂಬಿಸಲಿದ್ದಾರೆ.
ರೈಲ್ವೆ ಪೊಲೀಸ್, ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ಸಹಯೋಗದೊಂದಿಗೆ ಸೋನುಸೂದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫುಡ್ ಫ್ರಮ್ ಸೂದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೋನುಸೂದ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ 5 ಸಾವಿರ ಕೊಳಗೇರಿ ನಿವಾಸಿಗಳಿಗೆ ಆಹಾರದ ಕಿಟ್ ವಿತರಣೆ ಆಗಲಿದೆ.
ಬೆಂಗಳೂರಿನ ಸ್ಲಂ ನಿವಾಸಿಗಳಿಗೆ ಪ್ರತಿನಿತ್ಯ ಐದು ಸಾವಿರ ಆಹಾರದ ಪೊಟ್ಟಣವನ್ನು ರಿಚ್ಮಂಡ್ ಟೌನ್ ನ ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ನಲ್ಲಿ ಆಹಾರ ಸಿದ್ಧಗೊಳ್ಳಲಿದೆ.
ಸೋನುಸೂದ್ ಟ್ರಸ್ಟ್ ನ ಸ್ವಯಂ ಸೇವಕರ ಕಾರ್ಯಕ್ಕೆ ಬೀಜಿಂಗ್ ಬೈಟ್ಸ್ ರೆಸ್ಟೊರೆಂಟ್ ಮಾಲೀಕ ಇಬ್ರಾಹಿಂ ಕೈ ಜೋಡಿಸಿದ್ದು, ಪ್ರತಿನಿತ್ಯ 5ಸಾವಿರ ಮಂದಿಗೆ ಆಹಾರ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದಾರೆ.