ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಶ್ರಮಿಸುತ್ತಿರುವ ಬೆಂಗಳೂರಿನ ಪೊಲೀಸರಿಗೆ ಬಾಲಿವುಡ್ ನಟ ಸೋನು ಸೂದ್ ಆಕ್ಸಿಜನ್ ಕಾನ್ಸನ್ ಟ್ರೇಟರ್ ಯಂತ್ರ ಉಡುಗೊರೆಯಾಗಿ ನೀಡುವ ಮೂಲಕ ನೆರವು ನೀಡಿದ್ದಾರೆ.
ಸೋನು ಸೂದ್ ಚಾರಿಟಬಲ್ ಟ್ರಸ್ಟ್ ನಿಂದ ಮಂಗಳವಾರ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್’ಟ್ರೇಟರ್ ಯಂತ್ರ ತಲುಪಿಸಿದರು.
ಕೊರೊನಾ ವಾರಿಯರ್ಸ್ ಆಗಿ ಶ್ರಮಿಸುತ್ತಿರುವ ಪೊಲೀಸರಿಗೆ ಕೊರೊನಾ ಸೋಂಕು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಸುವ ಯಂತ್ರ ನೀಡಿದರು.
ಕಮಿಷನರ್ ಕಮಲ್ ಪಂತ್ ಅವರಿಗೆ ವಿಡಿಯೋ ಕಾಲ್ ಮಾಡಿದ ಸುಮಾರು 80 ಸಾವಿರ ಬೆಲೆಬಾಳುವ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರವನ್ನು ಸ್ವೀಕರಿಸುವಂತೆ ವಿನಂತಿಸಿದರು.
ಯಾವುದೇ ಪ್ರಚಾರವಿಲ್ಲದೇ ಸೈಲೆಂಟಾಗಿ ಪೊಲೀಸರಿಗೆ ಆಕ್ಸಿಜನ್ ಯಂತ್ರ ನೀಡಿ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತೆರಳಿದ್ದಾರೆ.