ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸಂಪುಟಕ್ಕೆ ಸೋಮವಾರ ಎಂಟು ಸಚಿವರು ಸೇರ್ಪಡೆಗೊಂಡಿದ್ದಾರೆ. ಆದ್ರೆ ರಾಷ್ಟ್ರದ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಲು ಹಣಕಾಸು ಸಚಿವರನ್ನು ನೇಮಿಸಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಹೊಸ ಮಂತ್ರಿಗಳಲ್ಲಿ ಡಗ್ಲಾಸ್ ದೇವಾನಂದ (ಮೀನುಗಾರಿಕೆ) ಸೇರಿದ್ದಾರೆ.
ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪೂರ್ಣ ಪ್ರಮಾಣ ಕ್ಯಾಬಿನೆಟ್ ರಚನೆಯಾಗುವವರೆಗೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ಅಧ್ಯಕ್ಷ ರಾಜಪಕ್ಸೆ ತಮ್ಮ ಸಂಪುಟವನ್ನು ವಿಸ್ತರಿಸಿ ಒಂಬತ್ತು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ನೂತನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ನೇಮಕ ಮಾಡಿದ ನಂತರ ಒಂದು ವಾರದ ಬಳಿಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ :- ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿಅಕ್ರಮ – ಅರಗ ಜ್ಞಾನೇಂದ್ರ ವಜಾ ಮಾಡುವಂತೆ ಸುರ್ಜೇವಾಲಾ ಆಗ್ರಹ
ನೂತನ ಸಚಿವರ ಪಟ್ಟಿ ಇಂತಿದೆ
ಕೆಹೆಲಿಯ ರಂಬುಕವೆಲ್ಲಾ – ಆರೋಗ್ಯ, ನೀರು ಸರಬರಾಜು
ಬಂಡುಲ ಗುಣವರ್ಧನ – ಸಾರಿಗೆ ಮತ್ತು ಹೆದ್ದಾರಿ, ಮತ್ತು ಸಮೂಹ ಮಾಧ್ಯಮ
ರಮೇಶ ಪತಿರಣ – ಕೈಗಾರಿಕೆ
ನಾಸೀರ್ ಅಹಮದ್ – ಪರಿಸರ
ಮಹಿಂದ ಅಮರವೀರ – ಕೃಷಿ, ವನ್ಯಜೀವಿ ಮತ್ತು ವನ್ಯಜೀವಿ ಸಂರಕ್ಷಣೆ
ವಿದುರ ವಿಕ್ರಮನಾಯಕ – ಬುದ್ಧಶಾಸನ, ಧರ್ಮ ಮತ್ತು ಸಂಸ್ಕೃತಿ
ರೋಶನ್ ರಣಸಿಂಗ್ – ನೀರಾವರಿ, ಕ್ರೀಡೆ ಮತ್ತು ಯುವಜನ
ಇದನ್ನೂ ಓದಿ :- ದಾವೋಸ್ ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭೇಟಿಯಾದ ಸಿಎಂ ನಿಯೋಗ