ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿಅಕ್ರಮ – ಅರಗ ಜ್ಞಾನೇಂದ್ರ ವಜಾ ಮಾಡುವಂತೆ ಸುರ್ಜೇವಾಲಾ ಆಗ್ರಹ

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ( ARRAGA JNANENDRA ) ಅವರನ್ನು ವಜಾ ಮಾಡಿ ಹಾಗೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

Cops living like dogs, taking bribes,' says Karnataka Home Minister Araga  Jnanendra in viral video | Deccan Herald


ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ₹75,00,000 ಪಿಎಸ್ಐ ಹಗರಣದ ಒಳಸುಳಿಗಳು ಬಯಲಾಗಿದೆ ಸ್ಕ್ರೀನ್ಶಾಟ್ಗಳನ್ನು ಒದಗಿಸಲಾಗಿದೆ “ಲಂಚ” ನೀಡಿದ ಪುರಾವೆ ಇದೆ ಎಂದಿದ್ದಾರೆ.
40% ಕಮಿಷನ್ ಬೊಮ್ಮಾಯಿ ಸರ್ಕಾರವು ಮೌನವಾಗಿದೆ . ಈ ನಿಟ್ಟಿನಲ್ಲಿ ಗೃಹಸಚಿವರನ್ನು ವಜಾ ಮಾಡಿ, ನ್ಯಾಯಾಂಗ ತನಿಖೆಗೆ ಆದೇಶಿಸಿ ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ. ಇದನ್ನೂ ಓದಿ :- ದಾವೋಸ್ ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭೇಟಿಯಾದ ಸಿಎಂ ನಿಯೋಗ

ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ ಇದೀಗ ಅಕ್ರಮದಲ್ಲಿ ಭಾಗಿಯಾದವರು ಎನ್ನಲಾದ ಕೆಲವು ಅಭ್ಯರ್ಥಿಗಳು ದೂರು ನೀಡಲು ಮುಂದಾಗಿದ್ದಾರೆ. ಪಿಎಸ್ಐ ಪರೀಕ್ಷೆ ರದ್ದು ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳು ಲಂಚದ ಹಣವನ್ನು ವಾಪಸ್ ಕೇಳಿದ್ದಾರೆ. ಆದರೆ ಹಣ ಅವರಿಗೆ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಬೇಸತ್ತು ತನಿಖೆ ನಡೆಸುತ್ತಿರುವ ಸಿಐಡಿಗೆ ತಾವೇ ಪೂರಕ ಸಾಕ್ಷಿಗಳನ್ನು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಟ್ವೀಟ್ ಮಾಡಿರುವ ಸುರ್ಜೇವಾಲ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ :- ವಿವಾದದ ಬಳಿಕ ಎಚ್ಚೆತ್ತುಕೊಳ್ಳದ ಸರ್ಕಾರ – ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಿಯುಸಿ ಪಠ್ಯ ಪರಿಷ್ಕರಣೆ!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!