ವರದಿ : ಧನು ಯಲಗಚ್
ಬೆಂಗಳೂರು : ಎಸ್.ಎಸ್.ರಾಜ್‍ಮೌಳಿ ನಿರ್ದೇಶನದ ಮೋಸ್ಟ್ ಅವೈಟೆಡ್ ಸಿನಿಮಾ ತ್ರಿಬಲ್ ಆರ್. ಬಾಹುಬಲಿ ಸಿನಿಮಾದ ನಂತರ ರಾಜ್‍ಮೌಳಿ ಬತ್ತಳಿಕೆಯಿಂದ ಹೊರಹೊಮ್ತಿರೋ ಪ್ರಾಜೆಕ್ಟ್ ಇದಾಗಿದ್ದು, ಸಹಜವಾಗಿಯೇ ಈ ಸಿನಿಮಾ ಮೇಲೆ ಬಾಹುಬಲಿ ಸಿನಿಮಾದ ಮೂರುಪಟ್ಟು ಕ್ಯೂರಿಯಾಸಿಟಿ ಇದೆ.
ಭಾರತೀಯ ಚಿತ್ರರಂಗದಲ್ಲಿ ಇಂತಹದೊಂದು ಸಿನಿಮಾವನ್ನು ಮಾಡ್ಬಹುದು ಅಂತಾ ಪ್ರೂವ್ ಮಾಡಿ ತೋರಿಸಿದ್ದು ಜಕ್ಕಣ್ಣ. ಟಾಲಿವುಡ್‍ನ ಮಾಸ್ಟರ್ ಮೈಂಡ್ ಡೈರೆಕ್ಟರ್ ಕೆಪ್ಯಾಸಿಟಿ ಏನು ಅಂತಾ ಇಡೀ ಜಗತ್ತೇ ನೋಡಿದೆ. ವಿಶ್ವದೆಲ್ಲೆಡೆ ಸೌಂಡ್ ಮಾಡಿದ ಬಾಹುಬಲಿ ಸಿನಿಮಾ ಆದ್ಮೇಲೆ ರಾಜ್‍ಮೌಳಿ ಮೇಲೆ ಭರವಸೆಯ ಜೊತೆಗೆ ಮುಂದೆ ಯಾವ ತರಹದ ಸಿನಿಮಾ ಕೈಗೆತ್ತಿಕೊಳ್ತಾರೆ ಅನ್ನೋ ಕ್ಯೂರಿಯಾಸಿಟಿ ಹುಟ್ಟಿಕೊಂಡಿತ್ತು.
ಆರ್‍ಆರ್‍ಆರ್ ಸಿನಿಮಾದ ಹಿಂದಿ ಹಾಗೂ ಉತ್ತರ ಭಾರತದ ರೈಟ್ಸ್‍ನ್ನ ಯಾರು ತೆಗೆದುಕೊಳ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಆದ್ರೀಗ ಆ ರೈಟ್ಸ್‍ನ್ನ ಪೆನ್ ಸ್ಟುಡಿಯೋ ತೆಗೆದುಕೊಂಡಿದೆ. ಚಿತ್ರದ ಡಿಜಿಟಲ್ ರೈಟ್ಸ್ ಭಾರೀ ಮೊತ್ತಕ್ಕೆ ತೆಗೆದುಕೊಂಡಿದ್ದು, ಮತ್ತಷ್ಟು ಕುತೂಹಲವನ್ನ ಮೂಡಿಸಿದೆ. ಇನ್ನು ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ, ಜ್ಯೂನಿಯರ್ ಎನ್‍ಟಿಆರ್ ಜೊತೆಗೆ ಬಾಲಿವುಡ್‍ನ ನಟಿ ಆಲಿಯಾ ಭಟ್, ಅಜಯ್ ದೇವಗನ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.
ಅಂದಹಾಗೆ ತ್ರಿಬಲ್ ಆರ್ ಸಿನಿಮಾವನ್ನ ಬರೋಬ್ಬರಿ 400ಕೋಟಿ ಬಜೆಟ್‍ನಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದಾರೆ. ಇನ್ನು ಈ ಸಿನಿಮಾ ರಿಲೀಸ್‍ಗೂ ಮೊದ್ಲೇ ಸ್ಯಾಟ್‍ಲೈಟ್, ಡಿಜಿಟಲ್ ರೈಟ್ಸ್‍ನಿಂದ ಭಾರೀ ಮೊತ್ತವನ್ನ ತನ್ನ ಪಾಲಾಗಿಸಿಕೊಂಡಿದೆ ಜಕ್ಕಣ್ಣನ ನಿರ್ದೇಶನದ ಸಿನಿಮಾ. ಇನ್ನು ಈ ಸಿನಿಮಾ ಇದೇ ಅಕ್ಟೋಬರ್ 13ಕ್ಕೆ ದೇಶದಾದ್ಯಂತ ತೆರೆ ಕಾಣಲು ಸಜ್ಜಾಗಿದ್ದು, ಈಗಿನಿಂದ್ಲೇ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ದುಪ್ಪಟ್ಟಾಗ್ತಿದೆ.