ನಿಂತಿದ್ದ ಟ್ಯಾಂಕರ್ ಗೆ ಓಮಿನಿ ಢಿಕ್ಕಿ: ಇಬ್ಬರ ಸಾವು

ಮಂಗಳೂರು : ನಿಂತಿದ್ದ ಟ್ಯಾಂಕರ್ ಗೆ ಓಮಿನಿ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳೂರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಬಳಿ ನಡೆದಿದೆ.

ಮೃತರನ್ನು ಫರಂಗಿಪೇಟೆಯ ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್ ಹಾಗೂ ಎಂಡಿ ಹುನೈಝ್ ಎಂದು ಗುರುತಿಸಲಾಗಿದೆ. ಎಂಡಿ ಮುಸ್ತಫಾ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮಂಗಳೂರಿನ ದಕ್ಕೆಯಲ್ಲಿ ಒಣ ಮೀನು ವ್ಯಾಪಾರಿಗಳಾಗಿದ್ದರು. ಮಂಗಳೂರಿನಿಂದ ಬಿಸಿರೋಡ್ ಕಡೆಗೆ ಹೋಗುತ್ತಿದ್ದ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಡ್ಯಾರ್ ಮಾಂಡೋವಿ ಕಾರು ಶೋ ರೂಂ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡದಿದೆ. ಅಪಘಾತದ ತೀವ್ರತೆಗೆ ಓಮ್ನಿ ಸಂಫೂರ್ಣ ನಜ್ಜುಗುಜ್ಜಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!