ರಾಜ್ಯಸಭೆಗೆ ನಾಲ್ವರನ್ನು ಕಳಿಸುವ ಅವಕಾಶ ನಮಗಿದೆ. ಈವರೆಗೆ ಯಾವ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಬೇರೆ ರಾಜ್ಯದವರನ್ನ ಆಯ್ಕೆ ಮಾಡೋದೇ ಒಂದು ನೀತಿಯಾಗಿದೆ ಎಂದು ವಾಟಾಳ್ ನಾಗರಾಜ್ (VATAL NAGRAJ ) ಹೇಳಿದ್ದಾರೆ .
ವಿಧಾನಸೌಧದಲ್ಲಿ ಮಾತಾನಾಡಿದ ಅವರು ಮತ್ತೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ಆಯ್ಕೆಗೆಯಾಗಲು ಬಯಸುತ್ತಿದ್ದಾರೆ. ನಮ್ಮ ರಾಜ್ಯದ ಎಲ್ಲಾ ಉನ್ನತ ಅಧಿಕಾರಿಗಳು ಹೊರ ರಾಜ್ಯದವರಾಗಿದ್ದಾರೆ . ಯಾವುದೇ ಕಾರಣಕ್ಕೂ ಹೊರ ರಾಜ್ಯದವರನ್ನ ಆಯ್ಕೆ ಮಾಡಬಾರದು. ನಮ್ಮ ರಾಜ್ಯದಲ್ಲೇ ಮೇಧಾವಿ, ಹೋರಾಟಗಾರರು ಇದ್ದಾರೆ. ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವಪ್ಪ , ಹಂ ಪ ನಾಗರಾಜ್ ಇವರೆಲ್ಲಾ ನಾಡಿನ ಅಗ್ರಗಣ್ಯರು. ಇಂಥಹವರನ್ನ ಆಯ್ಕೆ ಮಾಡಿ ಕಳುಹಿಸಿ ಎಂದು ರಾಜಕೀಯ ಪಕ್ಷಗಳಿಗೆ ವಾಟಾಳ್ ಮನವಿ ಮಾಡಿದ್ದಾರೆ.
ಬಸವರಾಜ್ ಬೊಮ್ಮಾಯಿ (BASAVARAJ BOMMAI ) ಒಳ್ಳೆಯ ಸಿಎಂ
ಬೊಮ್ಮಾಯಿ ಅವರ ಬದಲಾವಣೆಗೆ ಚಿಂತನೆ ನಡೆದಿದೆಯಂತೆ. ಬೊಮ್ಮಾಯಿ ಒಳ್ಳೆಯವರು, ಅವರು ಸಿಎಂ ಆಗಿ ಮುಂದುವರಿಯಲಿ ಎಂದು ಸಿಎಂ ಬೊಮ್ಮಾಯಿ ಪರ ವಾಟಾಳ್ ನಾಗರಾಜ್ ಬ್ಯಾಟಿಂಗ್ ನಡೆಸಿದ್ದಾರೆ. ಇದನ್ನೂ ಓದಿ : – ದಕ್ಷಿಣ ಭಾರತದಲ್ಲಿ ಚಿಗುರೊಡೆದ ಬಾಕ್ಸಿಂಗ್ – ಹೆಮ್ಮೆಯ ಸಾಧಕಿ ನಿಖತ್ ಝರೀನ್