ಮಂಡ್ಯ: ಜಮೀನಿನಲ್ಲಿರುವ ಕೃಷಿಹೊಂಡದಲ್ಲಿ ಈಜುಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಬಳಿ ನಡೆದಿದೆ.
ಬಳೆ ಅತ್ತಿಗುಪ್ಪೆ ಗ್ರಾಮದ ಮಹದೇವಪ್ಪ ಅವರ ಪುತ್ರ ಕಾರ್ತಿಕ್ (9) ಚಂದನ್ (12) ಹಾಗೂ ಮಲ್ಲಿಕಾರ್ಜುನ ಅವರ ಪುತ್ರ ರಿತೀಶ್ (9) ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದೆ. ಬೇವಿನಕುಪ್ಪೆ ಗ್ರಾಮದ ಜಯರಾಮು ಅವರ ಜಮೀನಿನ ಕೃಷಿ ಹೊಂಡದಲ್ಲಿ ಬಳೆ ಅತ್ತಿಗುಪ್ಪೆ ಗ್ರಾಮದ ಮೂವರು ಬಾಲಕರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪಾಂಡುವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವಗಳನ್ನು ಪಾಂಡುವಪುರ ಅಸ್ವತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಇನ್ನೂ ಈ ಸಂಬಂಧ ಪಾಂಡುವಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ತಹಸೀಲ್ದಾರ್ ಭೇಟಿ ನೀಡಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ, ಇಂತಹ ಪ್ರಕರಣ ಮರುಕಳಿಸದಂತೆ ಕ್ರಮಕ್ಕೆ ತಹಸೀಲ್ದಾರ್ ಗೆ ಶಾಸಕರು ಸೂಚಿಸಿದ್ದಾರೆ.