ತಿರುಪತಿ: ಕೋವಿಡ್19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕು ನಿಯಂತ್ರಣಕ್ಕೆ ತರಲು ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಹೀಗಾಗಿ ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಯಲ್ಲಿ ತಾತ್ಕಾಲಿಕವಾಗಿ ಸರ್ವದರ್ಶನ ಟೋಕನ್ನ್ನು ರದ್ದುಗೊಳಿಸಿ ಟಿಟಿಡಿ ಆದೇಶಿಸಿದೆ. ಏ.12ರಿಂದ ಸರ್ವದರ್ಶನ ಟೋಕನ್ಗಳು ತಾತ್ಕಾಲಿಕವಾಗಿ ರದ್ದುಗೊಳ್ಳಲಿವೆ. ಸರ್ವದರ್ಶನ ಟೋಕನ್ ಗಳಿಗಾಗಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಭೂದೇವಿ ಕಾಂಪ್ಲೆಕ್ಸ್, ವಿಷ್ಣು ನಿವಾಸಮ್ ನಲ್ಲಿ ಸೇರುವುದರಿಂದ ಕೋವಿಡ್-19 ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ.
ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟಿಟಿಡಿ ಹೇಳಿದೆ. ಸರ್ವದರ್ಶನ ಟೋಕನ್ಗಳನ್ನು ಏ.11ರ ಸಂಜೆಯವರೆಗೆ ವಿತರಿಸಲಾಗುವುದು. 300ರೂ. ಗೆ ಆನ್ಲೈನ್ ಕೋಟಾದಡಿಯಲ್ಲಿ ನೀಡುವ ಟೋಕನ್ಗಳ ವಿತರಣೆ ಮುಂದುವರೆಯಲಿದೆ. ಪ್ರತಿ ದಿನ ಆನ್ಲೈನ್ನಲ್ಲಿ ಸುಮಾರು 15 ಸಾವಿರ ಟೋಕನ್ಗಳನ್ನು ನೀಡಲಾಗುತ್ತದೆ ಎಂದು ಟಿಟಿಡಿ ಹೇಳಿದೆ.