ಶಾಲೆಗೆ ರಜೆ ಇದ್ದಿದ್ದರಿಂದ ಈಜಲು ತೆರಳಿದ್ದ ಮೂವರು ಮಕ್ಕಳು ನೀರಲ್ಲಿಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ಹೊರವಲಯದ ಮಾರನಗೆರೆಯಲ್ಲು ಬಳಿ ಸಂಭವಿಸಿದೆ.
ತರುಣ್ (11), ದೀಪಕ್ (13) ಮತ್ತು ಕೌಶಿಕ್ (13) ಮೃತ ದುರ್ದೈವಿಗಳು.
ಇಂದು ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆಯೇ 6 ಜನ ಸ್ನೇಹಿತರು ಮಾರನಗೆರೆ ಕೆರೆಯಲ್ಲಿ ಈಜಾಡಲು ತೆರಳಿದ್ದರು. ಮುಳುಗುತ್ತಿದ್ದ ಬಾಲಕನನ್ನ ರಕ್ಷಣೆ ಮಾಡಲು ತೆರಳಿದ ಇಬ್ಬರು ಸೇರಿದಂತೆ ಮೂವರು ನೀರಿನಕಲ್ಲಿ ಮುಳುಗಿದ್ದಾರೆ.
8ನೇ ತರಗತಿ ವಿದ್ಯಾರ್ಥಿಗಳಾದ ತಿಪಟೂರು ತಾಲೂಕು ಮತ್ತಿಹಳ್ಳಿ ವಾಸಿ ಕೌಶಿಕ್, ತಿಪಟೂರು ತಾಲೂಕು ಮುದ್ದೇನಹಳ್ಳಿ ವಾಸಿ ದೀಪಕ್ ಮತ್ತು 5ನೇ ತರಗತಿ ವಿದ್ಯಾರ್ಥಿ ತರುಣ್ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.