ಹೈದರಾಬಾದ್: ಟಾಲಿವುಡ್ ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ದೃಢಪಟ್ಟ ಹಿನ್ನಲೆ ಅವರು ಐಸೋಲೇಷನ್ಗೆ ಒಳಗಾಗಿದ್ದಾರೆ.
ಪವನ್ ಕಲ್ಯಾಣ್ ಸಣ್ಣ ಜ್ವರದಿಂದ ಬಳಲುತ್ತಿದ್ದರು. ಇದೇ ಹಿನ್ನಲೆ ಅವರು ಇಂದು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಜ್ವರ ಹೊರತಾಗಿ ಅವರು ಎದೆ ನೋವಿನಿಂದ ಕೂಡ ಬಳಲುತ್ತಿದ್ದು, ಹೃದಯತಜ್ಞರು ಅವರ ಪರೀಕ್ಷೆ ನಡೆಸಿದ್ದಾರೆ.
ಈ ವೇಳೆ ಅವರು ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿದೆ. ಈ ಹಿನ್ನಲೆ ಅವರಿಗೆ ಆಂಟಿವೈರಲ್ ಔಷಧಗಳನ್ನು ನೀಡಲಾಗಿದೆ. ಜೊತೆಗೆ ಆಕ್ಸಿಜನ್ ಕೂಡ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಂಕಿಗೆ ತುತ್ತಾಗುತ್ತಿದ್ದಂತೆ ತಮ್ಮ ಸಂಪರ್ಕಕ್ಕೆ ಒಳಗಾದವರಿಗೆ ಎಚ್ಚರವಹಿಸುವಂತೆ ಜನಾಸೇನಾ ನಾಯಕ ಮನವಿ ಮಾಡಿದ್ದಾರೆ.
ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ಅವರು ಸಾಕಷ್ಟು ಸುತ್ತಾಟ ನಡೆಸಿದ್ದರು. ಪರಿಣಾಮ ಪವನ್ ಕಲ್ಯಾಣ್ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್ ವರದಿ ಬಂದಿತ್ತು. ಇದು ಪವನ್ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ, ಅವರು ಹೋಂ ಕ್ವಾರಂಟೈನ್ ಆಗಿದ್ದರು. ಈಗ ಪವನ್ ಕಲ್ಯಾಣ್ಗೂ ಕೊರೊನಾ ಬಂದಿರುವುದರಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ತಜ್ಞರ ತಂಡ ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.