ಉತ್ತರ ಪ್ರದೇಶದ ಕಂದಾಯ ಮತ್ತು ಆಹಾರ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಮುಜಾಫರ್ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಜಯ್ ಕಶ್ಯಪ್ (56) ಬುಧವಾರ ಮುಂಜಾನೆ ಗುರ್ ಗಾಂವ್ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ.
ವಿಜಯ್ ಕಶ್ಯಪ್ ಕೊರೊನಾಗೆ ಬಲಿಯಾದ ಮೂರನೇ ಉತ್ತರ ಪ್ರದೇಶ ಸಚಿವರಾಗಿದ್ದಾರೆ. ಇದಕ್ಕೂ ಮುನ್ನ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌವ್ಹಾಣ್ ಕೊರೊನಾಗೆ ಬಲಿಯಾಗಿದ್ದರು.
ಸಚಿವ ವಿಜಯ್ ಕಶ್ಯಪ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ತಳಮಟ್ಟದಲ್ಲಿ ಶ್ರಮಿಸುತ್ತಿದ್ದ ಹಾಗೂ ಜನರ ಹಿತಾಸಕ್ತಿಗೆ ಶ್ರಮಿಸುತ್ತಿದ್ದರು. ಅವರ ನಿಧನ ಬೇಸರ ತರಿಸಿದೆ ಎಂದು ಹೇಳಿದ್ದಾರೆ.