ಬೆಂಗಳೂರು : ಸಂಜಯ್ ನಗರ ಇನ್ಸ್ ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಯಿಂದ ವೈದ್ಯನ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಕಾತ್ಯಾಯಿಣಿ ಮತ್ತು ಇಬ್ಬರು ಕ್ರೈಂ ಸಿಬ್ಬಂದಿ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಖಾಸಗಿ ವೈದ್ಯ ನಾಗರಾಜ್ ಮೇಲೆ ಹಲ್ಲೆ ಮಾಡಿ ಹಣ ಪಡೆದಿರುವ ಆರೋಪದ ವಿಡಿಯೋ ವೈರಲ್ ಆಗಿತ್ತು. ತನಿಖೆಗೆ ಆದೇಶಿಸಿ ಎಸಿಪಿ ರೀನಾ ಸುವರ್ಣಾ ಅವರಿಗೆ ವರದಿ ನೀಡಲು ಆದೇಶಿಸಿದ್ದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ. ವರದಿ ಬರೋವರೆಗೂ ಇನ್ಸ್ಪೆಕ್ಟರ್ ಕ್ಯಾತಾಯಿನಿ ಸೇರಿ ಮೂವರನ್ನು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಡಿಸಿಪಿ ತಾಕೀತು ಮಾಡಿದ್ದರು.
ಪ್ರಕರಣದ ಆಂತರಿಕ ತನಿಖೆ ನಡೆಸಿ ವರದಿಯನ್ನು ಡಿಸಿಪಿಗೆ ಸಲ್ಲಿಸಿದ ಎಸಿಪಿ ಇದೇ ತನಿಖಾ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೂ ಡಿಸಿಪಿ ಕಳುಹಿಸಿದ್ದರು. ಪರಿಶೀಲನೆ ನಡೆಸಿದ ಮೇಲ್ನೊಟಕ್ಕೆ ಆರೋಪ ಸಾಬೀತು. ಈ ಹಿನ್ನಲೆ ಇನ್ಸ್ ಪೆಕ್ಟರ್ ಸೇರಿ ಮೂವರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ಆದೇಶಿಸಿದ್ದಾರೆ.