ಹೈದರಾಬಾದ್: ಟಾಲಿವುಡ್‍ನಲ್ಲಿ ತಮ್ಮದೇ ಆದ ಒಂದು ಕ್ರೇಜ್, ಒಂದು ಸ್ಟಾರ್‍ಡಮ್, ಜೊತೆಗೆ ರಾಶಿ ರಾಶಿ ಪ್ಯಾನ್ ಫಾಲೋವಿಂಗ್ ಇರೋ ಸ್ಟಾರ್ ನಟ ಪವನ್ ಕಲ್ಯಾಣ್. ಪವರ್ ಸ್ಟಾರ್ ವರ್ಷಕ್ಕೊಂದೇ ಸಿನಿಮಾ ಕೊಟ್ರು ವರ್ಷಪೂರ್ತಿ ಫ್ಯಾನ್ಸ್‍ಗೆ ಭೂರಿ ಬೋಜನ, ಸದ್ಯ ವಕೀಲ್ ಸಾಬ್ ಚಿತ್ರಕ್ಕಾಗಿ ಕಾತರದಿಂದ ಕಾಯ್ತಿರೋ ಪವನ್ ಕಲ್ಯಾಣ್ ಅಭಿಮಾನಿಗಳಿಗೆ, ನಿನ್ನೆ ಸಿಕ್ತು ನೋಡಿ ಒಂದು ಟ್ರೇಲರ್ ಅನ್ನೋ ಧಮಾಕಾ.
ಈ ಹಿಂದೆ ಪೋಸ್ಟರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿದ್ದ `ವಕೀಲ್ ಸಾಬ್’, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು. ಇದೇ ಏಪ್ರಿಲ್ 9ಕ್ಕೆ ಬಿಡುಗಡೆಯಾಗಲು ಸಿದ್ಧವಾಗಿರೋ ಪವನ್ ಕಲ್ಯಾಣ್‍ರ ವಕೀಲ್‍ಗಿರಿ ನೋಡೋಕೆ ಸಿನಿ ಪ್ರಿಯರು ಕೂಡಾ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರತಂಡದಿಂದ ಟ್ರೇಲರ್‍ವೊಂದು ಹೊರಬಂದಿದ್ದು ಈ ನಿರೀಕ್ಷೆಯ ಮಹಾಪೂರವನ್ನ ದುಪ್ಪಟ್ಟು ಮಾಡಿದೆ.
ನಟ ಪ್ರಕಾಶ್ ರೈ ಎದುರು ನಿಂತು ಕೋರ್ಟ್‍ನಲ್ಲಿ ಹೆಣ್ಣಿನ ಬಗ್ಗೆ ವಾದ-ವಿವಾದಗಳು, ಕ್ಲಾಸ್ ಆಗಿ ಸಮಸ್ಯೆ ಬಗೆಹರಿಯದಿದ್ರೆ ನನ್ನ ನೆಕ್ಸ್ಟ್ ವರ್ಷನ್ ಮಾಸ್ ಆಗಿರುತ್ತೆ ಅನ್ನೋದು ಟ್ರೇಲರ್‍ನಲ್ಲಿ ಎದ್ದು ಕಾಣಿಸುತ್ತೆ, ಜೊತೆಗೆ ನ್ಯಾಯ ಬೇಕು ಅಂದ್ರೆ ಕ್ಲಾಸ್‍ಗೂ ಸೈ ಮಾಸ್‍ಗೂ ಸೈ ಎನ್ನುವ ವಕೀಲ್‍ಗಿರಿ ಈ ಪವರ್ ಸ್ಟಾರ್‍ದು. ಒಟ್ಟಿನಲ್ಲಿ ಟ್ರೇಲರ್ ನೋಡಿದೋರಿಗೆ ಸಿನಿಮಾ ನೋಡಲೇಬೇಕು ಎಂದು ಕಾಯುವಂತೆ ಮಾಡಿರುವುದಂತೂ ಸುಳ್ಳಲ್ಲ ಬಿಡಿ.